ಮಂಗಳವಾರ, ಜನವರಿ 22, 2013

ಕವಿಯಿತ್ರಿ ಮಲ್ಲೇಶ್ವರಿ ಉದಯಗಿರಿ ಬೀದರ ಅವರು ಬರೆದಿರುವ ಕೆಲವು ಕವನಗಳು.

ಮಲ್ಲೇಶ್ವರಿ ಉದಯಗಿರಿ

2012ರ ಮೈಸೂರು ದಸರಾ ಕವಿಗೋಷ್ಠಿಯಲ್ಲಿನ ಕವನ
ನಿನಗೇನ ಕೊಡಲಿ

ಜೀವಕ್ಕೆ ಭಾವವಿತ್ತ ನಿನಗೇನಂತ ಕೊಡಲಿ
ನೋವಿಗೆ ಸಾಂತ್ವನಿಸುವ ನಿನಗೇನಂತ ಹಾಡಲಿ
ಚಾಕ್ಷುಸವೇ ನೀನಾಗಿ ಹೊಳೆವೆ
ಬಾಳ ಕಾಠಿಣ್ಯವೆಲ್ಲ ತೊಳೆವೆÉ

ಒಮ್ಮೆ ಮಗುವಿನ ಮನಸಾಗಿಸುವೆ
ಮಗುದೊಮ್ಮೆ ನಗುಮೊಗ ತರುಣಿಯಾಗಿಸುವೆ
ಚಿತ್ತ ಅತ್ತಲಿತ್ತ ಹೋಗದಂತಿರಿಸುವೆ
ಸುತ್ತೆಲ್ಲ ಕತ್ತಲಾವರಿಸದಂತೆ ಕಾವಲಿರುವೆ

ಹರಿದ ವೀಣೆ ತಂತಿ ಸರಿಪಡಿಸಿದೆ
ಮೀಟಿ ನಾದಂಗಳ ಸಂಭ್ರಮಿಸಿದೆ
ಮಾಡಿದಪರಾಧಗಳೆಲ್ಲ ಮನ್ನಿಸಿದೆ
ಇರುಳೆಲ್ಲ ನಿದ್ರೆ ಕರುಣಿಸಿದೆ

ಸಂತಸದ ಹೊನಲುಕ್ಕಿ ಹರಿಸಿದೆ
ಮುಳುಗುವ ದೋಣಿ ಹರಿಗೋಲಾದೆ
ಸಾವಿನ ಮುಸುಕನ್ನು ಸರಿಸಿದೆ
ತೊಳಲಾಟದ ಮನಸಿಗೆ ತಡೆದೆ

ಸನಿಹ ಬಂದೆ ಆನಂದ ತಂದೆ
ಒಂಟಿಯಾದೆನಗೆ ಸಂಗಾತಿಯಾದೆ
ನನಗೆ ನೀನು ನಿನ್ನಿಂದ ನಾನಾದೆ
ಭಾವ ತುಂಬಿದ ಹೆಜ್ಜೇನಾದೆ

-ಮಲ್ಲೇಶ್ವರಿ ಉದಯಗಿರಿ
 

1.ನೆನಪು

ಮುಂಗಾರಿನ ಹನಿಯು ಉದುರುವಾಗ
ಮುಸ್ಸಂಜೆ ರಶ್ಮಿಯು ಮೂಡುವಾಗ
ನಿನ್ನ ನೆನಪೆ ನನಗೀಗ

ಹಳ್ಳದ ದಂಡಿಗಿ ಕುಳಿತಾಗ
ಮೀನಾಕ್ಷಿ ನಾ ನಗುವಾಗ
ನಿನ್ನ ನೆನಪೆ ನನಗೀಗ

ತುರುಕರುಗಳು ಮರಳುವಾಗ
ಮನೆ ಮನೆ ದೀಪ ಬೆಳಗುವಾಗ
ನಿನ್ನ ನೆನಪೆ ನನಗೀಗ

ಭಾವಸ್ಪರ್ಶದಿ ಹರ್ಷಗೊಂಡಾಗ
ಬಾನಾಡಿಯಾಗಿ ಹಾರುವಾಗ
ನಿನ್ನ ನೆನಪೆ ನನಗೀಗ

ಮಲ್ಲಿಗೆ ಮೊಗ್ಗು ಅರಳುವಾಗ
ಘಮWಮಿಸಿ ನಗುವಾಗ
ನಿನ್ನ ನೆನಪೆ ನನಗೀಗ

ಹುಣ್ಣಿಮೆ ಚಂದ್ರನ ಬೆಳಕಿನಾಗ
ತಣ್ಣನೆ ಗಾಳಿ ಸೂಸುವಾಗ
ನಿನ್ನ ನೆನಪು ನನಗೀಗ

ಹಣೆಯ ಕುಂಕುಮ ನಗುವಾಗ
ಅನುರಾಗ ಚಿಗುರುವಾಗ
ನಿನ್ನ ನೆನಪು ನನಗೀಗ

2.ಕನ್ನಡ...ಕನ್ನಡ

ಕನ್ನಡ ನುಡಿ ಛಂದ
ಕನ್ನಡದ ನಡೆ ಅಂದ
ಕರುನಾಡಿನ ಗುಡಿ ಛಂದ

ಕನ್ನಡ ಮಣ್ಣು ಗಂಧ
ಕರುನಾಡಿನ ಮರ ಶ್ರೀಗಮಧ
ಕನ್ನಡ ನುಡಿ ಸೌಗಂಧ

ಕನ್ನಾಡಿನ ಶೂರ ಯೋಧ
ಮಾಡುವನು ಶತೃಗಳ ಶೋಧ
ಗುಂಡಿಟ್ಟು ಮಾಡುವ ವಧ

ಕನ್ನಡದ ರೊಟ್ಟಿ ಥೆಳ್ಳಗ
ಎಣ್ಣಿ ಹಚ್ಚಿ ರೊಟ್ಟಿಗೆ
ಮಜ್ಜಿಗೆ ತಂಪು ಹೊಟ್ಟಿಗೆ

ಕನ್ನಡ ತೇರು ಛಂದ
ಕನ್ನಡ ಧರಿನಾಡೆ ಅಂದ
ಕರುನಾಡ ಐಸಿರಿ ಸ್ವಛಂದ

ಕನ್ನಡ ಜನತೆ ಛಂದ
ಕನ್ನಡಿಗರ ಮಮತೆ ಅಂದ
ಮಲೆನಾಡ ಪರಮಾನಂದ

ಕಸ್ತೂರಿ ಪರಿಮಳ ಕನ್ನಡದಿಂದ
ಕನ್ನಡತಿ ಹುಡಿಯಿಂದ ಬಾಳಿಗಂಧ
ಕನ್ನಡದಿ ಮಡಿದರೆ ಮುಕ್ತಿಯಂಧ

   3.ಕುಣಿಯೋಣ ಬಾ

ಕುಣಿಯೋಣ ಬಾ ಕೆಳದಿ
ಸುಮ್ಮನ್ಯಾಕ ನೀ ಉಳದಿ

ಕುಂಟೆ ಬಿಲ್ಲೆ ಆಡುವಾಗ ಬಾ
ಒಂಟಿಗಾಲಲ್ಲಿ ನಿಲ್ಲುವ ಬಾ

ಹಸಿರೆಲೆ ರೊಟ್ಟಿ ವಾಕುವ ಬಾ
ಉಸುಕಿನ ಪಲ್ಯಾ ಉಣ್ಣುವ ಬಾ

ಮಾವಾಗಿ ಚಿಗುರು ಬಾ
ಬೇವಿಗೆ ಹೂವಾಗಿ ಅರಳು ಬಾ

ಗೊಂಬಿ ಮದವಿ ಮಾಡುವ ಬಾ
ಹೆಣ್ಣು ಗಂಡಾಗಿ ಕೂಡುವ ಬಾ

ಗೆಜ್ಜೆ ತೊಟ್ಟು ಕುಣಿಯುವ ಬಾ
ರಸಿಕರದೆಯ ತಣಿಸುವ ಬಾ

ಚಿಕ್ಕಿ ಚಂದ್ರಮಾಗಿ ಹೊಳೆವ ಬಾ
ಹಕ್ಕಿಯಂತಾಗಿ ಹಾರುವ ಬಾ

ನಿಸರ್ಗ ಸವಿ ಸವಿಯುವ ಬಾ
ಸ್ವರ್ಗದಾನಂದ ಪಡೆಯುವ ಬಾ

ಕನಸುಗಳ ಸಾಸಿರ ಕಟ್ಟುವ ಬಾ
ಗುರಿ ಬಯಕೆಗಳ ಮುಟ್ಟುವ ಬಾ

ಸಂಜೆಯಾಯ್ತೀಗ ಮರಳುವ ಬಾ
ಮುಂಜಾನೆ ಮತ್ತೆ ಆಟಕ್ಕೆ ಬಾ

4.ಕನ್ನಡ

ಬೆಳಗಾಗಿ ನಾನೆದ್ದು ನುಡಿವೆ ಕನ್ನಡ
ಮೈ ತೊಳೆವಾಗ ಉಲಿವೆ ಕನ್ನಡ

ಜನುಮ ಜೋಡಿ ಸರಸ ಕನ್ನಡ
ಅನುರಾಗ ಸಲ್ಲಾಪ ಕನ್ನಡ

ಪ್ರಸವ ವೇದನೆ ಕನ್ನಡ
ನಾ ಹಡೆವ ಕೂಸೂ ಕನ್ನಡ

ನಾ ಬರೆವ ಸಾಹಿತ್ಯ ಕನ್ನಡ
ನಾನಿರುವ £ಲÉ ಕನ್ನಡ

ನಾನಾರಾಧಿಸುವ ಶಾರದೆ ಕನ್ನಡ
ಕಂದನ ತುಟಿಯ ಲಾಲಿ ಕನ್ನಡ

ಹಾಡುವ ಜೋಗುಳ ಕನ್ನಡ
ನಾ ಕಾಣುವ ಕನಸು ಕನ್ನಡ

ಹಣೆಯ ಕುಂಕುಮ ಕನ್ನಡ
ನಾ ಮಾಡುವ ಸಿಂಘಾರ ಕನ್ನಡ

ನಾನರಳಿದ  ಕಾವ್ಯ ಕನ್ನಡ
ನಾನಿಡುವÀÀ ಹೆಜ್ಜೆ ಕನ್ನಡ

ನಾ ಮಿಡಿವ ವಚನ ಕನ್ನಡ
ನಾ ತೊಡುವ ನೂಪುರ ಕನ್ನಡ

ನಾನುಡುವ ಸೀರೆ ಕನ್ನಡ
ನಾ ಹೊದ್ದ ಕೌದಿ ಕನ್ನಡ

ಸುರಿವ ನುಚ್ಚು ಮಜ್ಜಿಗೆ ಕನ್ನಡ
ಕುಡಿವ ಜೀವ ಜಲ ಕನ್ನಡ

ಹಾರಿಸುವ ದ್ವಜ ಕನ್ನಡ
ಸಂಸ್ಕಾರದ ಮಣ್ಣು ಕನ್ನಡ


     5.ಕುಂಕುಮ

ಕರ್ನಾಟಕ ಮಣ್ಣೆನಗೆ ಕುಂಕುಮ
ಕನ್ನಡ ನುಡಿನಂಗೆ ಡಿಂಡಿಮ

ಕರ್ನಾಟ ಜಲ ಜೀವ-ಜಲ
ಕರ್ನಾಟಕ ಮಡಿಲೆ ಹಾಸಿಗೆ

ಕರ್ನಾಟಕ ಮುಗಿಲೆನಗೆ ಹೊದ್ದಿಕೆ
ಕರ್ನಾಟಕ ಸಾಹಿತ್ಯ ಚೈತನ್ಯ

ಕನ್ನಡದಿ ಹುಟ್ಟಿದರೆ ಧನ್ಯ, (ಅನನ್ಯ)
ಕನ್ನಡ ಕುಸುಮ ಘಮಘಮ

ಮಲೆನಾಡ ಕರ್ನಾಟಕದ ಕಣ್ಣ
ಕನ್ನಡದ ಕುವರಿ ನಡು ಸಣ್ಣ

ಮೈಸೂರು ಅರಮನೆ ಸ್ವರ್ಗ
ಬೇಲೂರ ಶಿಲ್ಪವೇ ನಿಸರ್ಗ

ಬೀದರ ಕರ್ನಾಟಕ ಕರೀಟ
ಬೆಂಗಳೂರು ಮಣಿ ಮುಕುಟ

ಶಾರದೆ ಮಂದಿರ ಶೃಂಗೇರಿ
ಹರಿವ ತುಂಗಭದ್ರೆ ಸುಂದರ

ಕೃಷ್ಣದೇವರಾಯ ದಿಗ್ಗಜ
ಹಂಪಿ ಹಾಡುವುದು ಸರಿಗಮ

ಮತ ಧರ್ಮಗಳ ಸಂಗಮ
ಕನ್ನಡÀತಿ ನುಡಿ ಸಿಂಚನ

6.ಬಿಂಕ

ಮಲ್ಲಿಗೆಯು
ಮುಡಿದು
ಕನ್ನಡಿ ಕಂಡು
ಚೆಲುವೆ ನೀನೆಂದು ಹೇಳಬೇಡ

ಜರತಾರಿ ಉಟ್ಟು
ಮೂಗುತಿ ತೊಟ್ಟು
ಸರಸರನೆ ಓಡಾಡಿ
ಸುಂದರಿ ನೀನೆಂಬ
ಹೆಮ್ಮೆ ಬೇಡ

ದಿನವೆಲ್ಲ
ಏನೇನೋ ಗುಣಗುಣಿಸಿ
ಶೃತಿಯಿಲ್ಲದೆ ಹಾಡಿ
ಗಾಯಕ ನೀನೆಂದು ಬೀಗಬೇಡ

ಗಡಿಕಾಯ್ವೆ
ಮಸೀದಿ ಕಾಯ್ವೆ
ದಿನ-ರಾತ್ರಿ ದುಡಿವೆ
ಗಂಡೆಂಬ ಹೆಮ್ಮೆ ಬೇಡ

ಕಟ್ಟಿದ ಕನಸು
ಬಿಚ್ಚಿಟ್ಟ ಬಯಕೆ
ಎದೆಯಲ್ಲಿಟ್ಟು
ಸುಖಿಯೆಂದು ಹೇಳಬೇಡ

ಕಂಬನಿ ಉದುರಿ
ಆಸೆ ಕಮರಿ
ಬಾಡಿದರೂ ನೀ
ಹೂವೆಮದು ಹೇಳಬವೇಡ

7.ಗೆಳೆಯ

ಗೆಳೆಯ ಜೊತೆಯಲ್ಲಿದ್ದರೆ
ನಾ ಜಗವನ್ನೆ ಗೆಲ್ಲುವೆ

ಹರಿವ ನದಿ, ಸಾಗರಗಳ
ಈಜಿ ಬರುವೆ

ಹಿಮಾಲಯ ಏರಿ ಇಳಿವೆನು
ಮಮತೆಯ ತೊರೆದು ಬರುವೆ

ಖಡ್ಗವ ಹಿಡಿದು ನಿಲ್ಲುವೆ
ಗಂಜಿಯೇ ಅಮೃತವೆಂದು ತಿಳಿವೆ

ನಂಜೆಲ್ಲ ಕುಡಿದು ನಗುವೆ
ವೈರಿಗಳ ಸೊಲ್ಲಡಗಿಸುವೆ

ಬದುಕೆಲ್ಲ ಬೆಳಕಾಗಿಸುವೆ
ಭಾವದುಡಿಗೆ ತೊಟ್ಟು ನಗುವೆ

ಗೆಜ್ಜೆ ಕಟ್ಟಿ ಕುಣಿ ಕುಣಿದು
ಚಿಕ್ಕಿ ಚಂದ್ರಾಮವಾಗಿ ಮಿನುಗುವೆ

ವಸಂತವಾಗಿ ಚಿಗುರುವೆ
ದೀಪವಾಗುರಿಸು ಬೆಳಕ ನೀಡುವೆ

8.ಕವಿತಾ

ಕವಿತಾ ಸ್ನೇಹ ಮಾಡಿ ನೋಡಿ
ಕಾವ್ಯವ ನಿತ್ಯ ಬರೆದು ಓದಿ

ಭಾವ ಬೀಜ ಉತ್ತಿ ಬಿತ್ತಿ
ನೋವ ಭಾರ ಎತ್ತಿ ಇಳಿಸಿ

ಕಳೆದ ಕನಸುಗಳ ಹುಡುಕಿ
ವಾಗ್ದೇವಿ ಚಿನ್ನ ತಡಕಿ

ಬೇಂದ್ರೆ ಭಾವರಸ ಕೊಂಡು
ಕುವೆಂಪು ನಿಸರ್ಗ ಉಂಡು

ಕಗ್ಗದ ಸಗ್ಗಕೆ ಹೆಜ್ಜೆಯಿಟ್ಟು
ನಿಸಾರ ಗೀತೆಗೆ ಗೆಜ್ಜೆಕಟ್ಟು

ಹದಿಬದೆ ತಿರುಳ ಓದಿ
ಅದುವೆ ಕಾವ್ಯದ ಹಣ್ಣಾದಿ

ಕಣವಿ ಕಾವ್ಯದ ಬಣವಿ
ಉಳವಿ ಅಕ್ಕ ಹುಟ್ಟಿದಡವಿ

ಕಲ್ಯಾಣ ಕ್ರಾಂತಿ ಕಹಳೆ ಊದಿ
ಬಸವ ವಚನ ಹಾಡಿ ಹಾಡಿ

ಭಾವ ಮದಿರೆ ಸವಿದು ನೋಡಿ
ಭಾವ ಪರವಶದ ಮೋಡಿ
ಭಾವದರಮನೆ ಕಟ್ಟಿ ನೋಡಿ
ಭಾವ ಚಿಲುಮೆ ನೀರೂಡಿ


9.ಲೇಸು

ನಿನ್ನ ಹಂಗಿನರಮನೆಗಿಂತ ಲೇಸು
ಭಾವದಂಗಳ

ಬಾಳ ಶರಪಂಜರಕ್ಕಿಂತ ಲೇಸು
ಕವಿತೆ ºಂದರ

ನಿನ್ನೊಂದಿಗಿನ ಹೆಜ್ಜೆಗಿಂತ ಲೇಸು
ಕವಿತಾಲ ಕಾಲ್ಗೆಜ್ಜೆ

ಪ್ರೇಮ ಸ್ಪರ್ಶಕ್ಕಿಂತ ಲೇಸು
ಕಾವ್ಯಾಂಗನೆಯ ಸ್ಪರ್ಶ

ನೀ ತರುವ ಉಡುಗೊರೆಗಿಂತ ಲೇಸು
ಭಾವದುಡುಗೋರೆ

ನೀ ಕಟ್ಟಿದ ಗುಳಿದಾಳಿಗಿಂತ ಲೇಸು
ಪದಗಳ ಮಣಿಹಾರ

ಜನುಮ ಜೋಡಿಗಿಂತ ಲೇಸು
ಅನುಪಮ ಕಾವ್ಯದ ಮೋಡಿ

ನೀ ತರುವ ಗೆಜ್ಜೆಗಿಂತ ಲೇಸು
ಭಾವದ ಸಜ್ಜೆ

ನಿನ್ನ ವಿರಹಕ್ಕಿಂತ ಲೇಸು
ಕಾವ್ಯ ಬರಹ
ನೀ ಮುಡಿಸುವ ಕುಸುಮಕ್ಕಿಮತ ಲೇಸು
ಭಾವ ಕುಸುಮ

10.ಕಾಣಿಕೆ

ಲೆಕ್ಕಣಿಕೆ ಕೈಗಿತೆನ್ನ ಮರೆಯಾಗಿ
ಜೀವದಡಿಗಡಿಗೆ ಯೋಗಿ
ಸಂಗಾತಿಯಿಂದೆನ್ನ ದೂರ ಸರಿಸಿ
ಸಂಗೀತವಾಗಿ ಹಾಡಲು ಕಲಿಸಿ

ವಿಷಯಗಳಿಂದ ದೂರವಿರಿಸಿ
ಹರ್ಷ ಗೀತವ ತಂದು ಉಡಿಯಲಿರಿಸಿ
ನುಡಿ ಸೇವೆಗೆಂದೆನ್ನ ಅಣಿಗೊಳಿಸಿ

ಕಾವ್ಯ ಕುಸುಮವಾಗಿ ಕುಸಮಿಸಿ
ಬಾಳ ಪಥದ ದಿವ್ಯ ಪ್ರಭೆಯಾಗಿಸಿ
ಕಟಾಕ್ಷ ತೈಲ ಲೆಕ್ಕಣಿಕೆ ತುಂಬಿಸಿ

ಬಾಳತುಂಬ ಬಲೆಯ ಬೀಸಿ
ಮರಗಾಡಿಗೊಯಿದೆನ್ನ ನಿಲ್ಲಿಸಿ
ಜ್ವಾಲೆಯಾಗುರಿಸು, ಶಿಲೆಯಾಗಿ ನಿಂದು

ನೆರಳಾಗಿನಿಂದು ಉರುಳಾಗಿ ಬಂದು
ಶರನ್ಮೇಘವಾಗುದುರಿ ಮಾವಾಗಿ ರಸದುಂಬಿಸಿ
ಬೇವಾಗಿ ಅರಳಿ ಸಿಡಿಲಾಗಿ ಸ್ಪೋಟಿಸಿ

ಗುಂಡಿಗೆಯ ಬಡಿತ ತುಡಿತವಾಗಿ
ನದಿಯಾಗಿ ಹರಿದು £ದಂಗಳಾಗಿ ಉಕ್ಕಿ
ಜಗದೆದೆಯ ಶ್ವೇತದಿ ಬರೆ ಬರೆ ನೀ

ಯುಗದೆದೆಯ ಕಂಬನಿಯ
ಒರೆ ಒರೆಸಿ

ಹಿಗ್ಗಿನ ಹಾಡು

ಹಿಗ್ಗಿನ ಹಾಡನು ಹಾಡುವೇನು
ಮಗ್ಗಿ ನಾನಾಗಿ ಅರಳುವೆನು
ಹುಗ್ಗಿಯ ಸಗ್ಗೆವ ನೋಡುವೆನು
ಹುಗ್ಗಿಯ ಉಂಡುಂಡು ನಲಿವೆನು
ಸ್ಪರ್ಶದ  ಹರ್ಷವನು ಬರೆವೆನು
ವರ್ಷದ ಆನುಭÀವ ಪಡೆವೆನು

ವಚನಾದಿ ಪಡೆನುಡಿ ಓದುವೆನು
ಅರವತ್ಮೂರು ಪುರಾತನರ ಅರಿವೆನು
ಕದಳಿಯ ಹೊಕ್ಕು ನೋಡುವೆನು
ಕಲ್ಯಾಣದಂಗಳದ ಕೂಸಾಗುವೆನು
ಬಸವಾದಿ ಶರಣರ ಹಸುಗೂಸಾನು
ಧರನಾಡಿನಲೆಲ್ಲ ತಿರುಗಾಡುವೆನು

ಮಲೆನಾಡ ನೋಡಿ ಕುಣಿವೆನು
ರತ್ನತ್ರಯರ ಓದುವೆನು
ಕಗ್ಗದ ಸಗ್ಗಕೆ ಹೋಗುವೆನು
ಕನ್ನಡತಿ ನಾನೆಂದು ಉಬ್ಬಿ ನುಡಿವೆನು
ಕನ್ನಡದ ಹಾಡ ಹಾಡುವೆನು
ಕನ್ನಡ ನೆಲದಿ ಮಣ್ಣಾಗುವೆನು
ಮಹಿಳಾ ಜಾಗೃತಿ ಮೂಡಿಸುವೆನು
ವನಿತೆಯರ ಬಡಿದೆಬ್ಬಿಸುವೆನು

ನಿನಗೇನ ಕೊಡಲಿ


ಜೀವಕ್ಕೆ ಭಾವವಿತ್ತ ನಿನಗೇನಂತ ಕೊಡಲಿ
ನೋವಿಗೆ ಸಾಂತ್ವನಿಸುವ ನಿನಗೇನಂತ ಹಾಡಲಿ

ಚಾಕ್ಷುಸವೇ ನೀನಾಗಿ ಹೊಳೆವೆ
ಬಾಳ ಕಾಠಿಣ್ಯವೆಲ್ಲ ತೊಳೆದೆ

ಒಮ್ಮೆ ಮಗುವಿನ ಮನಸಾಗಿಸುವೆ
ಮಗದೊಮ್ಮೆ ನಗುಮೊಗ ತರುಣಿಯಾಗಿಸುವೆ
ಚಿತ್ತ ಅತ್ತಲಿತ್ತ ಹೋಗದಂತಿರಿಸುವೆ
ಸುತ್ತೆಲ್ಲ ಕತ್ತಲಾವರಿಸದಂತೆ ಕಾವಲಿರುವೆ

ಹರಿದ ವೀಣೆಯ ತಂತಿ ಸರಿಪಡಿಸಿದೆ
ಮೀಟಿ ನಾದಗಳ ಸಂಭ್ರಮಿಸಿದೆ
ಮಾಡಿದಪರಾಧಗಳೆಲ್ಲ ಮನ್ನಿಸಿದೆ
ಈರುಳೆಲ್ಲ ನಿದ್ರೆ ಕರುಣಿಸಿದೆ

ಸಂತಸದ ಹೊನಲುಕ್ಕಿ ಹರಿಸಿದೆ
ಮುಳುಗುವ ದೋಣಿ ಹರಿಗೋಲಾದೆ
ಸಾವಿನ ಮುಸುಕನ್ನು ಸರಿಸಿದೆ
ತೋಳಲಾಟ ಮನಸಿಗೆ ಊರುಗೋಲಾದೆ

ಸನಿಹ ಬಂದೆ ಆನಂದ ತಂದೆ
ಒಂಟಿಯಾದೆನಗೆ ಸಂಗಾತಿಯಾದೆ
ನನಗೆ ನೀನು ನಿನ್ನಿಂದ ನಾನಾದೆ
ಭಾವ ತುಂಬಿದ ಹೆಜ್ಜೆ ನಾದೆ


ಕನ್ನಡತಿ

ಕನ್ನಡತಿ ನನ್ನವ್ವ ನನ್ನ ಪಡೆದವ್ವ
ಜೋಗುಳ ಹಾಡಿ ಅಮೃತವನೂಡಿ
ಬೆಳೆಸಿದಳು ಕನ್ನಡ ನುಡಿಯ ಹಾಡಿ

ಗಂಗೆ ತುಂಗೆಯರ ಉಕ್ಕುಕ್ಕಿ ಹರಿಸಿ
ಹಸಿರಿನ್ಹಾಸಿಗೆ ನೆಲದಿ ಹಾಸಿ
ಕನ್ನಡತನ ಬೆಳೆಸುವ ಕನ್ನಡಿಗಳಾಗಿಸಿ

ಚಿನ್ನದ ನುಡಿಯ ಉಡಿಯಲಿರಿಸಿ
ಹತ್ತಾರು ಭಾಷೆ ಒತ್ತಡ ಸಹಿಸಿ
ಬಣ್ಣದ ಬರಹವ ಬರೆಯಲು ಕಲಿಸಿ
ಬದುಕಿದಳು ನನ್ನವ್ವ ನುಡಿ ವುಳಸಿ

ಗಡಿಯ ಕತ್ತಲೆ ಅಳಿಸಿ
ನೆರೆ ಕೆಂಡವ ಮಡಿಲಲಿರಿಸಿ
ಹಿಂದಿಯಿಂದ ಚಿಂದಿ
ತಮಿಳಿಂದ ಬೂದಿಯಾಗಿ

ತೆಲುಗಿನ ನಿಂದೆ ಮರಾಠಿಯಿಂದ ನೋವಾಗಿ
ರಾಜಕೀಯ ನಾಯಕರ ಕೈಗೊಂಬೆಯಾಗಿ
ಎಳೆದೆತ್ತ ಓಡುವಳು ಬಂಧಿಯಾಗಿ

ಶತಮಾನಗಳೇ ಕಳೆದು ದಂಡೆಯಿರದಾಗಿ
ಕನ್ನಡ ದೋಣಿ ಅಂಬಿಗಳಾಗಿ
ಸ್ವಾತಂತ್ರ್ಯ ಪಡೆದಳು ಭಾಷೆ ಬೆಳೆಸಿ
ಶಾಸ್ತ್ರೀಯವಾದಳು ನುಡಿಗೆಲಿಸಿ

ನೀನು

ನನ್ನಲ್ಲಿ ತೊಡವುಗಳು ಕಳಚಿದೆ
ನೈರಾಸ್ಯಪೂರ್ಣತೆ ಅಳಿಸಿದೆ

ಹಾಡಿನ ಭಾವದಿ ವಿಲೀನವಾದೆ
ಭಾವ ಝಣತ್ಕಾರದಿ ಝೇಂಕರಿಸಿದೆ

ನಿನ್ನ ಹುಡುಕಾಟದಿ ನನ್ನೆ ಮರೆಸಿದೆ
ಜೀವ ಜೇನಾಗಿ ನೋವ ಹೂವಾಗಿಸಿದೆ

ಕಾವ್ಯದ ಹೊನಲೆ ಹರಿಸಿದೆ
ವಿಷಯಂಗಳಿ ಗೆಳೆಸದೆ ಚಿತ್ತಾರವಿರಿಸಿದೆ

ಏಕಾಂಗಿಗೆ ಸಹಪಯಣಿಗನಾದೆ
ಹಂಬಲಿತ ಎದೆದುಂಬ ತಂಬೆಲರಾದೆ

ಕಾವ್ಯದಂಬಲಿಯ ಕುಡಿಸಿ ತಾಯಾದೆ
ಶುಷ್ಕ ಮೈಯೊಳಗೆಲ್ಲ ಕಾಂತಿಯಾದೆ

ರಾಡಿಯಾದ ಬದುಕ ತಿಳಿಯಾಗಿಸಿದೆ
ಪಶ್ಚಾತ್ತಾಪ ಪರದೆಯ ಸರಿಸಿದೆ

ಕಾವ್ಯಸ್ಪರ್ಶದಲೆಲ್ಲ ನಿನ್ನ ಹರವು
ಪರಮಾನಂದದ ಪರಮಾವಧಿ ನೀವು

ಹುಡುಕಾಟ, ತಡಕಾಟ ಮಿಡುಕಾಟವು
ಸಮಾಗಮದಿ ಭಾವ ತುಂದಿಲಳಾದೆ

ಜೇನಗೂಡ ಹೃದಯದವಳಾದೆ
ಓಂಕಾರನಾದವನು ನುಡಿದೆ

ಕನಕದಾಸ

ಕನಕ ದಾಸವರ್ಗದ ನಿಜ ಕನಕ ಬೆನಕ
ವ್ಯಾಸರಾಯನ ಶಿಷ್ಯ ಹಾಲುಮತ ಜನಕ

ಸಂತ ಕವಿ ಪರಿವರ್ತಕ ಹರಿಕಾರ
ದಾಸವರೇಣ್ಯ ಪಾಳೆಯಗಾರ

ನಳ ಚರಿತ್ರೆ ಹರಿಭ್ಕತಸಾರ ರಚಿಸಿದ
ಮೋಹನ ತರಂಗಿಣಿ ವಿರಚಿಸಿದ

ಕುಲಕುಲವೆಂದ ಕುಲದ ನೆಲೆ ತಿಳಿಸಿದ
ಉಂಡು ನಗದಿಹ ಮೋರೆ ಕಹಿ ಸೋರೆ

ಒಕ್ಕಲಲ್ಲದ ಊರು ಕೊಳೆತು ನಾರುವ ನೀರು
ನೆನೆದರೊಮ್ಮೆ ಗಮ್ಮ ನೋಡಿ ಬರುವವ

ನಾವು ಕುರುಬರು ಬೀರಪ್ಪ ನಮ್ಮದ್ಯಾವರು
ಕಾವ ನಮ್ಮಜ್ಜ ನರಕುರಿ ಹಿಂಡವರು

ಪದಗಳ ಮುತ್ತು ಪೋಣಿಸಿದ ಇವ
ಕೇಶವನ ಬಾಗಿಲನು ತೆರೆಯಿಸಿದವ

ದರುಶನ ಪಡೆದ ಮೊದಲ ಮಾನವ
ತಿಮ್ಮಪ್ಪ ನಾಯಕ ಕನಕದಾಸನಾದವ

ಕನಕನ ಕಾವ್ಯ ಓದಿ ಮರೆಯದೆ
ಆದಿಕೇಶವ ಭಕ್ತ ಅವ ಜೀವನ್ಮುಕ್ತ
ರೊಕ್ಕ ಎರಡಕ್ಕೂ ದು:ಖ ಕಾಣಕ್ಕ
ಕುರುಬ ಜನಾಂಗದ ಮಾಣಿಕ್ಯ

ಪ್ರಕೃತಿ ಮುನಿಸು

ಗಾಳಿ ಬೀಸದಾಯಿತೇಕೆ
ತೊರಲ್ಹೇಗೆ ಧಾನ್ಯವು
ತುಂಬಲ್ಹೇಗೆ ಬಾಳ ಚೀಲವು
ಮೈತುಂಬ ಸಾಲವು

ಬಿತ್ತಿದೆ ಸಾಲು ಸಾಲು
ರಂಟೆ ಕುಂಟೆ ಹೊqದೆÉ ದಿನಾಲು
ಹುಟ್ಟು ಒಕ್ಕಲಿಗರು ನಾವು
ಒಕ್ಕಲೆಮ್ಮ ಸನಾತನ ಬಾಳು

ಹಂತಿ ಹಾಡುತ ಆರಾಧಿಸುತ
ಧಾನ್ಯ ಬೇಕು ಜನತೆಗೆ
ಅನ್ನಬೇಕು ಬದುಕಿಗೆ
ಬೆಳೆಯಿಂದ ಬಾಳು ಕೂಳು

ಕಾದು ಮೈಯೆಲ್ಲ ಧೂಳು
ನgರÀ ಕಾಟಕ್ಕೆ ಪಶುತ್ವದಾಟಕ್ಕೆ
ಯಂತ್ರ ಮಾನವನ ನಗ್ನ ನೃತ್ಯಕ್ಕೆ
ನಾವು ಯಂತ್ರ ಮಾನವರಲ್ಲ ನಂಬು

ನಿನ್ನ ಮಣ್ಣನು ಹೊನ್ನಾಗಿಸುವೆವು
ನಮ್ಮದು ಕಾಯ ಬೆವರುವ ಕಾಯಕ
ಭೂಮಿಗೆಲ್ಲ ನಾವೇ ನಾಯಕ
ಮುನಿಸು ಸಾಕುಗಾಳಿ ಬೇಕು

ಬಿಡಿ ನಮಗೆ

ನಂಜಿನ
ಗಂಜಿಯ
ಉಂಡುಂಡು
ಪಂಜು
 ಹಿಡಿಯದೆ
ಜಂಗಮನ
ಸತ್ಯವ
ಡಂಗುರ ಭಾರಿಸಲು ಬಿಡಿ ನಮಗೆ
ಕರಕಲಾದ
ಬಯಕೆ
ನಂದ ಆಸೆಗಳ
ಸುಂದರ ಕನಸುÀ
ಪುರುಷಾರ್ಥದ
ಕ್ರೌರ್ಯವ
ಹೂಳಲು ಬಿಡಿ ನಮಗೆ
ಅಂದಿನಿಂದ
ಅದುಮಿಟ್ಟ
ನೋವು
ಕಂಬನಿ
ತಾಪ
ಕೋಪ
ವ್ಯಥೆ
ಈಸ್ರ್ಯೆ
ತೂರಲು ಬಿಡಿ ನಮಗೆ
ಕೊಲೆಯಾದ
 ನೇಣಿಗೇರಿದ
ಬಾವಿಗೆ ಹಾರಿದ
ರಕ್ಕಸರೊಂದಿಗಿನ
ಬಾಳಿನ ಗೋಳನು
ಸೇವಕಿಯಾಗಿಸಿ
ದುಡಿಸಿ ಕೊಂಬವರೆದೆ
ಸೀಳಲು ಬಿಡಿ ನಮಗೆ

ಭಾವರಸ
ನಾನು ನಾನಲ್ಲ
ಭಾವ ಚಂದ್ರಿಕೆಯಾಗಿ
ಭಾವರಸ
ಕುಡಿದು

ತಣಿದು
ಕವಿತೆಯಾಗುತ್ತೇನೆ!
ಪ್ರೇಮಕಾವ್ಯವಾಗಿ
ಪ್ರೇಮಿಗಳ

ಒಂದಾಗಿಸಿ
ಅನುರಾಗವಾಗುತ್ತೇನೆ
ಸುಂದರ
ಸೊಡರಾಗಿ

ಬತ್ತಿಯಾಗುರಿದು
ಬೆಳಗುತ್ತೇನೆ
ಮಗುವಾಗಿ
ಮೊಲೆಯುಂಡು

ಅಂಬೆಗಾಲಿಕ್ಕಿ
ತೊದಲುತ್ತೇನೆ
ಪೋರಿಯಾಗಿ
ತುಸುನಕ್ಕು

ಮುಗ್ಧೆಯಾಗುತ್ತೇನೆ
ಮೌನವಾಗಿ
ಮುಗ್ಧೆಯಾಗುತ್ತೇನೆ
ಮದುವಣಗಿತ್ತಿ

ತಾಯಾಗಿ ಆಯಾಗಿ
ಕೊನೆಯಾಗುತ್ತೇನೆ
ನಿಸರ್ಗ ಕಂಡು
ನಾಚಿ ನೀರಾಗುತ್ತೇನೆ

ಕನಸ ಕನ್ಯೆ ಮನದನ್ನೆ
ಭಾವದನ್ನೆಯಾಗಿ
ಕುಣಿಯುತ್ತೇನೆ
ಹನಿಗವಿತೆ
ನೀಳ್ಗವಿತೆ
ವಚನ ಗಜಲ್ ಆಗುತ್ತೇನೆ

ಬಾಲಿಕ ನೆನಪು

ನಡುಮನೆ ತೊಟ್ಟಿಲಲ್ಲಿ ಮಲಗಿದಾಗ
ಅಮ್ಮನ ಜೋಗುಳ ಕೇಳುತ್ತಿರುವಾಗ
ಅಮೃತ ಸವಿದು ಚಿಗುರೊಡೆವಾಗಿನ
ನೆನಪು ಹನಿಯಾಯ್ತೀಗ

ಪಡಸಾಲೆ ಮೆಟ್ಟಿಲಿಳಿಯುವಾಗ
ಬುಗುಟಿಯಾಗಿ ರೊಕ್ಕ ಕಿತ್ತೆಸೆಯುವಾಗ
ಉಚ್ಚೆ ಹೊಯ್ದು ನೆಕ್ಕತಲಿರುವಾಗಿನ
ನೆನಪು ಗಜಲಾಯ್ತೀ

ಉಂಗುರಾದ ಮುಂಗುರುಳು ಕತ್ತರಿಸುವಾಗ
ಅಂಬೆಗಾಲಿನ ಹೆಜ್ಜೆ ಇಡುವಾಗ
ಗೆಜ್ಜೆ ಸದ್ದು ಮನೆ ತುಂಬಿದಾಗಿನ
ನೆನಪು ಮನಿಯಾಯ್ತೀಗ

ಮುತ್ಯಾನ ಮೀಸೆ ಎಳೆವಾಗ
ಸೆರಗ ಮರೆಯಲಿ ಅವಿತಾಗ
ಕಣ್ಣ ಮುಚ್ಚಾಲೆ ಆಡುವಾಗ
ನೆನಪೆ ಕವಿತೆಯಾಯ್ತೀಗ

ಬೆತ್ತಲೆ ಬೀದಿಯಲ್ಲಿರುವಾಗ
ಬಣ್ಣದ ಪತಂಗ ನಾನಾಗ
ಊರಿನ ಮುದ್ದುಗೂಸಿನ
ನೆನಪೆ ಕಥೆಯಾಯ್ತೀಗ

ಭಾವದರಮನೆ ತುಂಬ

ಝಣ ಝಣ ಝಣ....
ತೋಂ ತನನ..ನ...ನ...
ಭಾವದರಮನೆ ತುಂಬ
ಶಾರದೆಯ ಪ್ರತಿಬಿಂಬ

ನಾಟ್ಯವಾಡುವಳು ಕೆನ್ನಾಲಿ ಮೇಲೆ
ಪದ ಸಾಲವು ಬರೆಯುವಳ ಲೀಲೆ

ಮೈತುಂಬ ಸ್ಪರ್ಶಿಸಿ
ಎದೆಯೆಲೆಲ್ಲ ಹರ್ಷಿಸಿ
ಬಾವ ಉತ್ಕರ್ಷಿಸಿಸಿ
ನನ್ನಿರುವಿಕೆಯ ಮರೆಸಿ
ಕಣ್ಣ ಹನಿಗಳ ಒರೆಸಿ
ಛೆಂಗನೆ ಕಾಣಿಸಿ

ರೋಮ ರೋಮಗಳೆಲ್ಲ ನಿಮಿರಿ
ಕನಸುಗಳೆಲ್ಲ ಗರಿಗೆದರಿ
ತಿರುಗಿದಂತೆ ಬುಗುರಿ
ಶೃಂಗೇರಿಯ ಮಠದಿ
ತುಂಗಭದ್ರೆಯ ತಟದಿ
ಕುಳಿತಂತೆ ದಿಟದಿ

ಆನಂದವಾಗಿ ಮನದಿ
ಪರಮಾನಂದ ತನುದಿ
ಪರಮಾಶ್ಚರ್ಯ ಹೃನ್ಮನದಿ
ಮಸಿದುಂಬಿದ ಲೆಕ್ಕಣಿಕೆ
ಸೊಗಸಾದ ಒಕ್ಕಣಿಕೆ
ಎರಿದಂತೆ ನಿಚ್ಚಣಿಕೆ

ಕವಿತಾ
ಚಿಕ್ಕಿಯಾಗಿ ಮಿನುಗುವೆ
ನನ್ನೆದೆಯಾಗೆಲ್ಲ ನೀನಿರುವೆ

ಇಬ್ಬನಿಯಾಗಿ ಹೊಳೆವೆ
ಮುಟ್ಟಿದರೆ ಕರಗುವೆ

ಕಂಬನಿಯಾಗುದುರುವೆ
ಕಣ್ಣೆವೆಯಾಗಿರುವೆ

ಸಂಗಾತಿಯಾಗಿ ಬಿಗಿದಪ್ಪುಗೆ
ಕೆಳದಿಯಾಗಿ ಸಾಂತ್ವನಿಸುವೆ

ಒಂಟಿ ಪಯಣದಿ ಜೊತೆಯಾಗುವೆ
ತುಂಟ ನಗೆಚೆಲ್ಲಿ ಮರೆಯಾಗುವೆ

ಕಾವ್ಯ ಕೂಸಾಗಿ ಜನಿಸುವೆ
ಭಾವದ ತೊಟ್ಟಿಲ ತೂಗುವೆ

ದೂರ ಹೋಗುವೆ ಏತಕೆ
ಮೂಕವಾಗದೆ ಕವಿತೆ!

ಕೆನ್ನೆಗೆ ಮುದ್ದನೀಡುವೆ
ಕೆಂದುಟಿಯ ಲಾಲಿಯಾಗುವೆ

ಕಿವಿಗೆ ಝುಮೇರೆಯಾಗುವೆ
ಜೀವಕೆಲ್ಲ ಕುಣಿ ಕುಣಿಸುವೆ

ನಿನ್ನ ಮರೆತು ಬದುಕಿರಬೇಕೆ
ಏನು ಕೊಡಲಿ ಕಾಣಿಕೆ


ಬಿಡಿ ಆಸೆ


ಪುರುಷಾರ್ಥ ಕ್ರೌರ್ಯವ ಹರಿದು
ಮೇಸೆ ಕಾಸೆಗಳೆಲ್ಲ ಹುರಿದು
ಬಯಕೆ-ಗುರಿಗಳೆಲ್ಲ ಮುರಿದು
ಕುಟ್ಟಿ ಪುಡಿ ಮಾಡುವಾಸೆ

ಶೋಷಕರ ಕಟ್ಟಿ ಗಿಡಕೆ
ಹುಸಿ ಪೋಷರೆಂದೆನುವರ ತಳಕೆ
ಶಂಕಿತರೆನುವ ಹೆಣ್ಕುಲಕೆ
ಬುಡಕ್ಕೆ ಬೆಂಕಿಯಿಡುವಾಸೆ

ದಾಸಿಯಾಗೆಮ್ಮ ದುಸಿಕೊಂಬುವ
ಹೂವಿಂದ ಹೂವಿಗೆ ಬಂಡುಂಬುವ
ರಾಮ-ರಾವಣ  ಮನುವ
ತಲೆ ತೆರೆದು ಹೂಳುವಾಸೆ

ವರದಕ್ಷಿಣೆ ಹಸಿವು ಹಿಂಗದವರ
ಹೆಣ್ಣು ಹೆತ್ತವರ ರಕ್ತ ಹೀರುವರ
ಕೆತ್ತರೆತ್ತಿ ತಿಪೊಣಿಸಿದವರ
ಹಾರ ತೊಟ್ಟುವಾಸೆ

ಬೆತ್ತಲೆ ಕುಣಿಸಿ ಕುಣಿದು
ಈರುಳೆಲ್ಲ ಸುಖ ಪಡೆದು
ಬಸಿರಾಗಿಸುವ ನೆತ್ತಿ ಒಡೆದು
ನೆತ್ತರೆ ಕುಡಿಯುವಾಸೆ


ನನ್ನಾಕೆ

ಓ ಮೇಘವೆ ಮೋಡ ಕವಿದೆ
ನನ್ನಾಕೆಯ ಕೇಶರಾಸಿಗೆ
ಮೋಡವೆಲ್ಲಿ ಸಾಗುವೆ

ತಿಂಗಳ ಬೆಳಕಂತ ಹೊಳೆವ ಕಂಗಳು
ನನ್ನಾಕೆ ಕಂಗಳ ಬೆಳಕಿನ
ಬೆಳದಿಂಗಳ ಬೆಳಕು ಸಮವೇ

ನವಿಲೆ ನಿನೇಕೆ ನರ್ತಿಸುವೆ ನಿಲ್ಲು
ನನ್ನಾಕೆ ನವಿರಾದ ಬಳುಕು
ನಡಿಗೆಗೆ ನಿನ್ನ ಕುಣಿತ ಸಾಟಿಯೇ

ಮುಸ್ಸಂಜೆ ದೀಪ ಕೆಂಬಣ್ಣವೇತಕೆ
ನನ್ನ ಹೊನ್ನ ಮೈ ಬಣ್ಣದ
ನಿನ್ನ ಕೆಮಪು ಅಂದವೆ

ಮೊಗ್ಗೆ ನೀನೇತಕೆ ಅರಳುವೆ
ನನ್ನಾಕೆ ಬಾಯ್ದೆರೆದಾಗ ಕೆಂದುಟಿ
ಗುಲಾಬಿ ಪಕಳೆಗಳು

ಆಭರಣವೇತಕೆ
ನಿಸರ್ಗದ ಸೀರೆಯುಟ್ಟು
ಭಾವದ ಭಗಿಯವಳು

ವಸಂತವೇ ನೀನೇಕೆ ಬರುವೆ
ನನ್ನಾಕೆಯೆ ವಸಂತ ಋತು
ಕಾವ್ಯದ ಕುಂಚದವಳು

ಭಾವಚಂದ್ರಿಕೆ

ಭಾವಚಂದ್ರಿಕೆ ಆನು ಮಾತಾಡು ಬನ್ನಿ
ಕಾವ್ಯ ಕನ್ನಿಕೆಯರು ಕೂಡ ಬನ್ನಿ

ಭಾವದುನ್ಮಾದದಲಿ ತೇಲಬನ್ನಿ
ಭವದರಸಿಯಾಗಿ ಮರೆವ ಬನ್ನಿ

ಭಾವಚಿಕ್ಕಿಯಾಗಿ ಹೊಳೆವ ಬನ್ನಿ
ಭಾವಪರ್ವ ಮಾಡುವ ಬನ್ನಿ

ಭಾವಗೀತೆ ಹಾಡ ಬನ್ನಿ
ಭಾವ ನೋವೆಲ್ಲ ಮರೆವ ಬನ್ನಿ

ಭಾವ-ಜೀವ ಗರ್ಭಧಾರಿಣಿ
ಬಯಕೆಯೂಟ ಮಾಡಿ ತನ್ನಿ

ಕಾವ್ಯ ಕೂಸದು ತೊಟ್ಟಿಲು ತನ್ನಿ
ನವ್ಯ ಮಗುವಿದೆ ಹೆಸರಿಸ ಬನ್ನಿ

ಬೇಂದ್ರೆ ಮೊಮ್ಮಗಳನು ನಡೆಸ ಬನ್ನಿ
ಕಾರಂತರ ತಂಗಿ ನುಡಿಗೆಲ್ಲಿಸ ಬನ್ನಿ

ಮಾಸ್ತಿ ಕನ್ನಡದ ಆಸ್ತಿ ತಿಳಿಸ ಬನ್ನಿ
ಕಗ್ಗದ ಸಗ್ಗಕ್ಕೆ ಕರೆದು ತನ್ನಿ

ಕುವೆಂಪು ಮಲೆನಾಡ ನೋಡ ಬನ್ನಿ
ಗಿರೀಶರ ನಾಟಕ ತೋರಿಸ ಬನ್ನಿ

ಭಾವ ಮದಿರೆ ಸವಿದು ಗೀಚಬನ್ನಿ
ಜಗದ ಸಂಔದರ್ಯ ಬಾಚ ಬನ್ನಿ

ನಮ್ಮೂರ

ನಮ್ಮೂರ ಹಳ್ಳದ ಮೀನು ಛಮದ
ಮಹಾದೇವ ಗುಡಿ ಮೆಟ್ಟಿಲುಗಳೇ ಅಂದ

ನಮ್ಮೂರ ಶಾಲೆ ರೈಲಿನಂತೆ ಉದ್ದುದ್ದ
ಕನ್ನಡ ಕಲಿಸುವ ಮಾಸ್ತರನಿದ್ದೆ

ಊರ ಮಧ್ಯ ಕರೆ ಕಲ್ಲಿನ ಮಠ ಉಂಟು
ಬಾರಾಹಳ್ಳಿಗೆಲ್ಲ ದಾಸೋಹದ ನಂಟು

ನನ್ನಜ್ಜ ನಿಜಾಮ ಕಾಲದ ಮಾಸ್ತರನಿದ್ದ
ಪುಕ್ಕಟ್ಟೆ ಅಕ್ಷರ ಉಣಬಡಿಸುತ್ತಿದ್ದ

ಶೂರ ಧೀರ ಯೋಧನೊಬ್ಬನಿದ್ದ
ಕಾರ್ಗಿಲ ಯುದ್ಧದಲಿ ಬಿಕ್ಕಣ್ಣನಾದ

ಇರುವುದು ನನ್ನೂರು ಇಳಿಜಾರಿನಲ್ಲಿ
ಇದ್ದಂತೆ ನಾವೆಲ್ಲ ಮಲೆನಾಡಿನಲ್ಲಿ

ಅವ್ವ ಉಣಿಸುವಳು ನುಚ್ಚು ಮಜ್ಜಿಗೆ
ಸುರಿದಾಗ ಹೋದಂತೆ ಸ್ವರ್ಗಸಜ್ಜಿದೆ

ಇದ್ದಳೆನ್ನ ಹೂ-ಬಳ್ಳಿಯಂಗ
ಕತ್ತಲೆಯಳಿಸುವ ಜ್ಯೋತಿಯಂಗ

ಸಕಲ ಜಾತಿ-ಮತಗಳ ತವರೂರು
ಕತ್ತಲೆಯಳಿಸುವ ಜ್ಯೋತಿಯಂಗ

ಸಕಲ ಜಾತಿ-ಮತಗಳ ತವರೂರು
ಸೌಖ್ಯ-ಶಾಂತಿ ಮಮತೆಯ ಬೇರು

ವರ್ಷಕ್ಕೊಮ್ಮೆ ನಡೆವುದು ಮಹಾದೇವನ ಜಾತ್ರಿ
ಹರ್ಷದಿ ಬರುವರೆಲ್ಲ ಮರೆಯದೆ ಖಾತ್ರಿ

ಬಾರದ ಮಳೆ

ಮಳೆ ಬರದೆ ಬೆಳೆ ಮೂಡಲಿಲ್ಲ
ಮುಂಗಾರಿನ ಹನಿ ಉದುರಲಿಲ್ಲ

ನೆಗಿಲ-ನೊಗಕೆ ಕೆಲಸವಿಲ್ಲ
ಕಂಬಾ ಬಲಿ ಹೊತ್ತಲಿಲ್ಲ

ಗುಳೆ ಹೊರಟ ರೈತ ಪಟ್ಟಣಕ
ಆದರೂ ತಿಳಿದಾಯ್ತು ಸರ್ಕಾರಕ

ಧೋತರ ತೋಯ್ದಿತ್ತ ಇವ ಅತ್ತರ
ಬಾರದಾದರೂ ನೆರವಿಗೆ ಯಾರ

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮಿಗಿಲು
ರೈತನ ಅವನತಿ ಜಗವೆಲ್ಲ ದಿಗಿಲು

ಎಲ್ಲೆಲ್ಲೂ ರೈತ ಸಾವಿನದೆ ಮಾತು
ಸತ್ತರೂ ಸಿಗಲಿಲ್ಲ ಪರಿಹಾರದ ಕಾಸು

ರೈತನ ಗೋವಿನ ಗತಿ ಏನಾಯ್ತು
ಗೋಹತ್ಯೆ ಮಾಡುವುದೇ ಹೆಚ್ಚಾಯ್ತು
ರೈತ ದುಡಿಮೆಯ ಜೀತದಾಳು
ಬೆಳೆಯುತ್ತಿಲ್ಲ ಒಂದು ಕಾಳು

ಮೈತುಂಬ ಸಾಲವೇ ಭಾರವಾಯ್ತು
ತೀರಿಸಲಾಗದೆ ನಿದ್ರೆ ಚಿರವಾಯ್ತು

ಕನಸು

ಹೊನ್ನ ಬಣ್ಣದ ಕನಸು
ಚಿಣ್ಣರ ಕಣ್ಣ ಕನಸು
ಬೆಳ್ಳಿ ಬೆಳಕಿನ ಕನಸು
ಸಿಳ್ಳೆ ಹೊಡೆವ ಕನಸು

ಭಾವ ತುಂಬಿದ ಕನಸು
ಜೇನಿನಂಥ ಕನಸು
ಸಾವು ತರುವ ಕನಸು
ಮೋಡ ಕವಿವ ಕನಸು

ಸಿಂಗಾರವಾಗುವ ಕನಸು
ಎಲ್ಲೆ ಮೀರುವ ಕನಸು
ಎಲ್ಲೋ ಹಾರುವ ಕನಸು
ಶಿಶಿರವಾಗುವ ಕನಸು

ಉಸಿರ ತುಂಬುವ ಕನಸು
ರೈತನ ನೇಗಿಲಾದ ಕನಸು
ಹಚ್ಚ ಹಸಿರಾಗುವ ಕನಸು
ಕೆಂಡವಾಗುವ ಕನಸು

ಮಿಡಿಮಾವಾಗುವ ಕನಸು
ಬೇವಾಗರಳುವ ಕನಸು
ಪತಂಗವಾಗುವ ಕನಸು
ನಿತ್ಯ ಕಾವ್ಯ ಕನಸು

ನುಡಿವೆ ಕನ್ನಡವನು

ಕೊಚ್ಚಿ ಕೊಲ್ಲಿದರೇನು
ಮೆಚ್ಚಿ ಹೊಗಳಿದರೇನು
ನುಡಿವೆ ಕನ್ನಡಾನು

ಬದುಕೆ ಸುಟ್ಟರೇನು
ಬಯಕೆ ಹರಿದರೇನು
ನುಡಿವೆ ಕನ್ನಡಾನು

ಯಾರು ತಡೆದರೇನು
ಯಾರು ತುಡಿದರೇನು
ನುಡಿವೆ ಕನ್ನಡಾನು

ಗಂಡ ಸತ್ತರೇನು
ಮುಂಡೆ ಬೋಳಿಸಿದರೇನು
ನುಡಿವೆ ಕನ್ನಡಾನು

ಕನಸು ಒಡೆದರೇನು
ಮನಸು ಮುರಿದರೇನು
ನುಡಿವೆ ಕನ್ನಡಾನು

ಹಲ್ಲಿ ಬಿದ್ದರೇನು
ಬೆನ್ನು ಬಾಗಿದರೇನು
ನುಡಿವೆ ಕನ್ನಡಾನು

ಮಳೆ ಸುರಿದರೇನು
ಬೆಳೆ ಒಣಗಿದರೇನು
ನುಡಿವೆ ಕನ್ನಡಾನು

ನಮ್ಮನೇಕೆ

ದಿನೆ ದಿನೆ ಕೊಲ್ಲುವಿರಿ ನಮ್ಮನೇಕೆ
ನಿತ್ಯ ನಿತ್ಯ ಹಿಂಸೆ ನಮ್ಮ ಮೇಲೇಕೆ

ಬೆತ್ತಲೆ ಕುಣಿಸಿ ಹಣ ಗಳಿಸುವಿರೇಕೆ
ಮೈತುಂಬ ಮುತ್ತಿಕ್ಕಿ ಕುಣಿಸುವಿರೇಕೆ
ನಂಬಿಸಿ ಸ್ನೇಹ ಬಯಸುವಿರೇಕೆ
ಚುಂಬಿಸಿ ನಮ್ಮೆದೆಯ ಮರೆಯುವಿರೇಕೆ

ಹಗಲಿರುಳೆನ್ನದೆ ನಮ್ಮೊಂದಿಗೆ ಮಲಗುವಿರೇಕೆ
ಗರ್ಭೀಯೆಂದಾಗ ಹಿಂಜರಿಯುವಿರೇಕೆ
ವರದಕ್ಷಿಣೆ ಪಡೆದು ಮದುವೆಯಾಗುವಿರೇಕೆ
ವಧು ಸರಿಯಿಲ್ಲವೆಂದು ಸುಡುವಿರೇಕೆ

ಪುರುಷಾರ್ಥದ ಮೀಸೆ ತಿರುವಿರೇಕೆ
ಪುರುಷವಲ್ಲದ ಬದುಕು ನಡೆಸುವಿರೇಕೆ
ಮನುವಿನ ಮಾತು ಮರೆಯಲಾರಿರೇಕೆ
ಬಸವಗೆ ಧ್ಯಾನಿಸದೆ ಇರುವಿರೇಕೆ

ಪುರುಷತ್ವ ದರ್ಪದಿಂದ ಸೆಟೆಯುವಿರೇಕೆ
ಆಸ್ತಿತ್ವ ಕಸಿದುಕೊಂಡು ನಗುವಿರೇಕೆ
ದುಂಬಿಯಾಗಿ ವನವನ ಸುತ್ತುವಿರೇಕೆ
ಮಧು ಹೀರುವಿರಿ ನಿಮಗಿಲ್ಲ ನಾಚಿಕೆ

ತೊಗಲು ಬೊಂಬೆಯಾಗಿ ಎಳೆಯುವಿರೇಕೆ
ನಮ್ಮಿಂದಲೆ ಜಗವು ಒಪ್ಪಲಾರಿರೇP

ಆಸೆ

ಮುಗಿಲಿಗೆ ಚುಂಬಿಸುವಾಸೆ
ನಕ್ಷತ್ರವಾಗಿ ಹೊಳೆಯುವಾಸೆ
ರವಿವರ್ಮನ ಕುಂಚವಾಗುವಾಸೆ
ಗಾಯಕನ ಕಂಠವಾಗುವಾಸೆ

ಮೇಘದ ಹನಿಯಾಗುದುರವಾಸೆ
ಧರಿನಾಡಿನಲೆಲ್ಲ ಕುಣಿಯುವಾಸೆ
ಈ ನೆಲದ ವಚನವಾಗುವಾಸೆ
ಅಮ್ಮನ ಮಡಿಲ ಮಗುವಾಗುವಾಸೆ

ಮುಂಜಾವಿನಿಬ್ಬನಿಯ ಮುತ್ತಾಗುವಾಸೆ
ಕನ್ನಡದ ಜೋಗುಳ ಪಾಡುವಾಸೆ
ಲೆಕ್ಕಣಿಕೆಗೆ ಮಸಿಯಾಗುವಾಸೆ
ಅಕ್ಕನ ಕದಳಿಯ ನೋಡುವಾಸೆ

ಬಾನಾಡಿಯಾಗಿ ಹಾರುವಾಸೆ
ನಮ್ಮೂರ ಗವಿಯಲ್ಲಿರುವಾಸೆ
ತರುಣಿಯ ಕಾಲುಂಗುರವಾಗುವಾಸೆ
ಕಾವ್ಯದ ಮಣಿಹಾರ ತೊಡುವಾಸೆ

ಗುಲ್‍ಮೋಹರಾಗಿ ಅರಳುವಾಸೆ
ಮಲೆನಾಡ ಮಗುವಾಗಿ ಜನಿಸುವಾಸೆ
ಕನ್ನಡ ತಾಯಾಗಿ ಮರೆವಾಸೆ

ಬೆತ್ತಲಾಗಿಸಿ

ರಾಮ ರಾವಣ
ಹರಿಶ್ಚಂದ್ರರ
ಕೃಷ್ಣಲೀಲರ
ಮನಸ್ಮøತಿಗಳ
ಬೆತ್ತಲಾಗಿಸಿ
ಮದಿರೆ ಕುಡಿಸಿ
ಜೀವ ಹಿಂಡಿ
ಊದಕೊಂಡವರ
ಗಲ್ಲಿಗೇರಿಸಲು
ಬಿಡಿಸಲೆಂಗೆ
ಕೆರೆ ನೀರು
ಕೆರೆಗೆ ಚೆಲ್ಲಿ
ಹೆಣ್ಣು ಹೆಣ್ಣಿಗೆ
ವೈರಿಯೆಂದ್ಹೇಳುವ
ಆಸ್ತಿತ್ವ ಕಸಿದು
ಕಾವಲಿಕ್ಕುವ
ಕಾಲಿಕ್ಕಿ
ಕುಂಕುಮ ಅಳಿಸಿ
ಚಾರಿತ್ರ್ಯ ಕಸಿವ
ಮುಖವಾಡಗಳ ಕೊಲ್ಲಲ್ಲು
ಬಿಡು ನಮಗೆ
-ಮಲ್ಲೇಶ್ವರಿ ಉದಯಗಿರಿ

 ವಿಳಾಸ:  ಮಲ್ಲೇಶ್ವರಿ ಉದಯಗಿರಿ
            ಪೊಲೀಸ್ ಹೆಡ್ಡ ಕಾನಸ್ಟೇಬಲ್
           



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ