ಗಜಲ್
-------
ಕಳೆದುಕೊಳ್ಳಬೇಕು ಈಗ ಮನದ ಭಾರ, ದುಗುಡಗಳನ್ನೆಲ್ಲ ನೀ ಜೊತೆಗಿದ್ದರೆ
ಪಡೆದುಕೊಳ್ಳಬೇಕು ಮುರಿದು ಬಿದ್ದ ಕನಸುಗಳು ನೀ ಸದಾ ಜೊತೆಗಿದ್ದರೆ

ಹೇಳದೇ ಉಳಿದಿರುವ ಮನಸಿನ ಮಾತುಗಳು ಕೇಳು ನೀ ಜೊತೆಗಿದ್ದರೆ
ಅನಾಥ ಭಾವನೆಗಳಿಗೆ ಹೇಗೆ ಬಿಟ್ಟ್ಟು ಕೊಡಲಿ ಈಗ ನೀ ಜೊತೆಗಿದ್ದರೆ

ಇಷ್ಟು ದಿನಾ ಕಳೆದು ಹೋದ ರಾತ್ರಿಗಳಿಗೆ ಬೆಳಕು ನೀಡಲು ನೀ ಜೊತೆಗಿದ್ದರೆ
ಹುಣ್ಣಿಮೆಯ ಚಂದ್ರ ಯಾಕೆ ಬೇಕಿತ್ತು ನಮ್ಮಿಬ್ಬರ ಮಿಲನಕ್ಕೆ ನೀ ಜೊತೆಗಿದ್ದರೆ

ಬಿಟ್ಟು ಬಿಡು ನಾಚಿಕೆ, ದುಃಖ ದುಮ್ಮಾನ ಮರೆಯಬೇಕು ನೀ ಜೊತೆಗಿದ್ದರೆ
ಮಧು ಬಟ್ಟಲಲ್ಲಿ ಕಳೆದ ಬದುಕಿನ ಸತ್ಯ! ಅರಿಯಬೇಕು ನೀ ಜೊತೆಗಿದ್ದರೆ

ಹರಿದು ಹೋದ ಕೌದಿಯಲ್ಲೂ ಚಿತ್ತಾರ ಕಾಣಬೇಕು ನೀ ಜೊತೆಗಿದ್ದರೆ
ಕೊಚ್ಚಿಕೊಂಡು ಹೋದ ಆಸೆ-ನಿರಾಸೆಗಳು ದಡ ಸೇರಬೇಕು ನೀ ಜೊತೆಗಿದ್ದರೆ

ಹೇಳಿ ಬಿಡು ನಿನ್ನೆದೆಯ ತಳಮಳ ‘ವೀರ’ ಎಂದರೆ ಹೇಗೆ ಹೇಳಲಿ ನೀ ಜೊತೆಗಿದ್ದರೆ
ಬರೆಯದ ಭಾವನೆಗಳು ಉಳಿದುಕೊಂಡಿವೆ ಒಣಗಿದ ಗಂಟಲಲ್ಲಿ ನೀ ಜೊತೆಗಿದ್ದರೆ

* ವೀರಣ್ಣ ಮಂಠಾಳಕರ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ