ಭಾನುವಾರ, ಡಿಸೆಂಬರ್ 16, 2012

ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಮಹಾನ್ ಸಾಧನೆಃ ಖೂಬಾ ಆರೋಪ

ಶಾಸಕ ಬಸವರಾಜ ಪಾಟೀಲ ಅಟ್ಟೂರ್

ಮಾಜಿ ಶಾಸಕ ಎಂ.ಜಿಯಮುಳೆ



ವಿಧಾನಸಭಾ ಚುನಾವಣೆಯಲ್ಲಿ ನಾನು ಜನಗಳ ಬೆಂಬಲ, ಆಶಿವಾ೯ದದಿಂದ ಗೆಲ್ಲುವುದು ಶತಸಿದ್ಧಃ ಖೂಬಾ ಅಭಿಮತ
ವೀರಣ್ಣ ಮಂಠಾಳಕರ್
---------------------
ಬಸವಕಲ್ಯಾಣ, ಡಿ.16ವಿಶ್ವಗುರು ಬಸವಣ್ಣನವರ ಬಗ್ಗೆ ಕಾಳಜಿ ಇಲ್ಲದ ಹಾಲಿ ಶಾಸಕ ಅಟ್ಟೂರ್್ ಮತ್ತು ಮಾಜಿ ಶಾಸಕ ಮುಳೆ ಅವರು, ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಮಹಾನ್್ ಸಾಧನೆ ಎಂಬುದನ್ನರಿತಿದ್ದಾರೆ. ತಾಲೂಕಾಭಿವೖದ್ಧಿಯ ಚಿಂತನೆ ಮಾಡದೇ ಸ್ವಾಥ೯ಕ್ಕಾಗಿ ತಮ್ಮದೇ ಕಲ್ಯಾಣವನ್ನು ಮಾಡಿಕೊಳ್ಳುತಿದ್ದಾರೆ ಎಂದು ರಾಜ್ಯ ಯುವ ಜೆಡಿಎಸ್್ ಕಾಯಾ೯ಧ್ಯಕ್ಷ ಹಾಗೂ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ವಾಗ್ದಾಳಿ ನಡೆಸಿದರು.

ಭಾನುವಾರ ಖೂಬಾ ನಿವಾಸದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪತ್ರಕತ೯ರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿ ಧಮ೯ದವರೊಂದಿಗೆ ಕೂಡಿಕೊಂಡು ಅಭಿವೖದ್ಧಿಯ ಕನಸು ಕಂಡಿರುವ ನನಗೆ ರಾಜಕೀಯದಲ್ಲಿ ಹಿರಿಯರಾದ ಮುಳೆ, ಅಟ್ಟೂರ್್ ಅವರಿಂದ ಏನು ಕಲಿಯಬೇಕು ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಇವರಿಗೆ ಮತದಾರರ ಬಗ್ಗೆಯಾಗಲಿ, ಪಕ್ಷದ ಕಾಯ೯ಕತ೯ರುಗಳ ಬಗ್ಗೆ, ಅಭಿವೖದ್ಧಿ ಚಿಂತನೆಗಳಿಲ್ಲ. ಕೇವಲ ಕಾಲಹರಣದ ರಾಜಕಾರಣ ಮಾಡುತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ, ಹಾಲಿ ಶಾಸಕರು ವಿಫಲ ಆಡಳಿತ ನಡೆಸುತ್ತಿದ್ದಾರೆ. ವಿದ್ಯುತ್್ ಕೊರತೆ, ಅಪೂಣ೯ ಕೆರೆಗಳು ನೆನೆಗುದಿಗೆ ಬಿದ್ದಿವೆ. ಎಸ್ಸಿ, ಎಸ್ಟಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಪಿಯು ಕಾಲೇಜು ಸೇರಿದಂತೆ ಮುಂತಾದ ಕಾಮಗಾರಿಗಳು ಬೇಜವಾಬ್ದಾರಿಯಿಂದ ವಾಪಸ್್ ಹೋಗಿವೆ ಎಂದು ಕಿಡಿ ಕಾರಿದರು.

ಬಸವಕಲ್ಯಾಣ ಕ್ಷೇತ್ರದ ಆಡಳಿತ ಸೋಲಾರ್್ ಶಕ್ತಿ ಬೆಳಕಿನ ಹಾಗೆ ನಡೆಯುತಿದ್ದು, ವೖದ್ಧರ, ವಿಧವೆಯರ, ಅಂಗವಿಕಲರ ಮಾಸಿಕ ವೇತನಗಳು ಇವರ ಅಧಿಕಾರವಧಿಯಲ್ಲಿ ಕಡಿತಗೊಳಿಸಲಾಗಿದೆ. ಹತ್ತಾರು ಸಮಸ್ಯೆಗಳ ಆಗರವಾಗಿರುವ ಇಲ್ಲಿನ ಆಡಳಿತ ಸಂಪೂಣ೯ ಕುಸಿದಿದೆ ಎಂದು ಆರೋಪಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿ೯ಸಬೇಕೆಂಬ ಆಸೆಯಿಂದ ಅಭಿವೖದ್ದಿಯತ್ತ ಗಮನ ಹರಿಸುತ್ತಿಲ್ಲ. ಇದರಿಂದ ಜನ ಸಾಮಾನ್ಯರ ಕೆಲಸ ಕಾಯ೯ಗಳು ಆಗದೇ ಇರುವುದರಿಂದ ಕಚೇರಿಗಳಲ್ಲಿನ ಭ್ರಷ್ಟಾಚಾರದಿಂದ ಜನ ಪರದಾಡುವಂತಾಗಿದೆ. ಕ್ಷೇತ್ರದ ಮತದಾರರು ಇನ್ನಾದರೂ ಜಾಗೖತರಾಗಬೇಕು ಎಂದು ಕರೆ ನೀಡಿದರು.

ಬಸವಕಲ್ಯಾಣ ಅಭಿವೖದ್ಧಿ ಮಂಡಳಿಗೆ ಪ್ರಸ್ತುತ ಸಕಾ೯ರ ಕೇವಲ 16 ಕೋಟಿ ಮಂಜೂರು ಮಾಡಿದೆ. ನಮ್ಮ ಜೆಡಿಎಸ್್ ಸಕಾ೯ರದ ಅವಧಿಯಲ್ಲಿ ಒಂದೇ ಸಲಕ್ಕೆ 23 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ತ್ರಿಪುರಾಂತ ಕೆರೆ ಕಾಮಗಾರಿ ಅಧ೯ಕ್ಕೆ ನಿಂತಿದೆ. ಇಲ್ಲಿ ಮಂಜೂರಾದ ಆಟೋ ಪಾಕ೯ ಇವತ್ತಿಗೂ ಪ್ರಾರಂಭಗೊಂಡಿಲ್ಲ. ಸಕಾ೯ರಿ ಕಚೇರಿಗಳಲ್ಲಿ 254 ಹುದ್ದೆ ಭತಿ೯ ಮಾಡಿಕೊಳ್ಳದಿರುವುದು ದುರಾದೖಷ್ಟವಾಗಿದೆ ಎಂದು ವಿಷಾದಿಸಿದರು.

ನಾನು ಕಳೆದ ಚುನಾವಣೆಯಲ್ಲಿ ಸೋತಿರುವುದರಿಂದ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಸುಧಾರಿಸಿದ್ದೇನೆ. ಸೋಲೆಂಬುದು ಮನುಷ್ಯನಿಗೆ ಬದುಕುವ ಪಾಠ ಕಲಿಸಿಕೊಟ್ಟು, ಜನರೊಂದಿಗೆ ಹೇಗೆ ಬೆರೆಯಬೇಕೆಂಬುದನ್ನು ಹೇಳಿ ಕೊಡುತ್ತದೆ. ಆದರೆ ಮುಳೆ ಅವರು 5 ಬಾರಿ ಸೋತರೂ ಇನ್ನೂ ಅವರಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ. ಅಟ್ಟೂರ್್ ಅವರಿಗೆ ಅಭಿವೖದ್ಧಿಯ ಚಿಂತನೆಯೇ ಇಲ್ಲ ಎಂದು ನೇರ ಆರೋಪಿಸಿದರು.

ಮೊಟ್ಟ ಮೊದಲು ಜೆಡಿಎಸ್್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾದ ಮುಳೆ ನಂತರ ಸೇಪ೯ಡೆಗೊಂಡಿದ್ದು ಕಾಂಗ್ರೆಸ್್ ಪಕ್ಷಕ್ಕೆ, ಇದಾದ ನಂತರ ಕಾಂಗ್ರೆಸ್್ನಿಂದಲೇ ಚುನಾವಣೆಯಲ್ಲಿ ಸ್ಪಧಿ೯ಸಿ 32 ಸಾವಿರ ಮತಗಳನ್ನು ಪಡೆದು ವಯಕ್ತಿಕ ಸ್ವಾಥ೯ದಿಂದ ಕಾಂಗ್ರೆಸ್್ ಪಕ್ಷ ಬಿಟ್ಟು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿ.ವಿಲಾಸರಾವ ದೇಶಮುಖ, ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ, ಪಿ.ಜಿ.ಆರ್್ ಶಿಂಧ್ಯೆ, ಖಗೆ೯, ಧರ್ಮಸಿಂಗ್್ ಮುಂತಾದ ಹಿರಿಯ ನಾಯಕರುಗಳಿಗೆ ಕೈಕೊಟ್ಟು, ಇದೀಗ ಬಿಎಸ್್ಆರ್್ ಪಕ್ಷಕ್ಕೆ ಸೇಪ೯ಡೆಗೊಂಡಿದ್ದು ಸ್ವಹಿತಾಸಕ್ತಿಯ ಲಾಭಕ್ಕಾಗಿ ಹೊರತು ಅಭಿವೖದ್ಧಿಯ ದೖಷ್ಠಿಕೋನದಿಂದಲ್ಲ ಎಂದು ದೂರಿದರು.

ಆಡಳಿತದಲ್ಲಿದ್ದ ಬಿಜೆಪಿಗೆ ಸೇಪ೯ಡೆಗೊಂಡು 54 ತಿಂಗಳಲ್ಲಿ ಮೂರು ಪಕ್ಷ ಬದಲಾಯಿಸಿದ ಮಾಜಿ ಶಾಸಕ ಮುಳೆ ಅವರು, ಎಲ್ಲಾ ಪಕ್ಷದ ರಾಜಕೀಯ ಮುತ್ಸದ್ದಿಗಳನ್ನು ಮತ್ತು ಕುಮಾರಸ್ವಾಮಿ ಅವರನ್ನು ಕೂಡ ಮೋಸ ಮಾಡಿದವರಾಗಿದ್ದಾರೆ. ಇವರೇನು ಎಂಬುದು ಜನರೇ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಖಾರವಾಗಿ ನುಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್್.ಯಡಿಯೂರಪ್ಪನವರು ಸ್ವಾಭಿಮಾನಕ್ಕಾಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಕೆಜೆಪಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಿದರೆ, ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ಹಿರಿಯ ರಾಜಕಾರಣಿಯಾಗಿ 7 ಸಲ ವಿಧಾನಸಭಾ ಚುನಾವಣೆ ಸ್ಪಧಿ೯ಸಿ, 5 ಸಲ ಗೆದ್ದು 2 ಸಲ ಸೋತ ಅನುಭವಿಗಳಾಗಿದ್ದರೂ ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ನೀಡದೇ ಕೆಜೆಪಿ ಸೇರಿರುವ ಬಗ್ಗೆ ಘೋಷಣೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಸಕ್ಕರೆ ಕಾಖಾ೯ನೆ ಸ್ಥಾಪಿಸುವುದಾಗಿ ಇಲ್ಲಿನ ರೈತರುಗಳಿಗೆ ದ್ರೊಹ ಬಗೆದ ಮುಳೆ ಅವರು, ಅನುಭವ ಬ್ಯಾಂಕ್್ನಿಂದ ಬಡವರ ಹಣ ದೋಚಿಕೊಂಡಿದ್ದಾರೆ. ಅದೇ ರೀತಿ ಬಿಎಸ್್ಎಸ್್ಕೆ ಸಕ್ಕರೆ ಕಾಖಾ೯ನೆಯಿಂದ ಏನೆಲ್ಲಾ ಲಾಭ ಪಡೆದಿದ್ದಾರೆ ಎನ್ನುವ ಮಾಹಿತಿಯ ಪಟ್ಟಿ ಮುಂದಿನ ದಿನಗಳಲ್ಲಿ ಕೊಡುತ್ತೇನೆ ಎಂದರು.

ಹಾಲಿ ಮತ್ತು ಮಾಜಿ ಶಾಸಕರುಗಳು ನನಗಿಂತ ಹಿರಿಯರಾಗಿದ್ದು, ನಾನು ಇವರಿಂದ ಮಾಗ೯ದಶ೯ನ ಪಡೆದು ಕ್ಷೇತ್ರದ ಜನರ ಸೇವೆ ಮಾಡುವುದನ್ನು ಕಲಿಯಬೇಕಾಗಿತ್ತು. ಆದರೆ ಇಬ್ಬರೂ ವಯಕ್ತಿಕ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವುದರಲ್ಲೇ ತಲ್ಲೀನರಾಗಿರುವುದು ನೋಡಿ ಇವರಿಂದ ಕಲಿಯಬೇಕಾದ್ದು ಏನಿದೆ ಎಂಬುದನ್ನು ತಿಳಿಯದಾಗಿದೆ ಎಂದು ಚಕಿತರಾದರು.

ಮುಂಬರುವ ಸಿಎಂಸಿ ಚುನಾವಣೆಗೆ ಸ್ಪಧಿ೯ಸಬೇಕೆಂಬ ಇಚ್ಚೆಯುಳ್ಳವರು ಸಂಬಂಧಪಟ್ಟ ವಾಡ೯ ಬಗ್ಗೆ ಸಂಪೂಣ೯ ಮಾಹಿತಿ, ಉತ್ತಮ ಸೇವಾ ಮನೋಭಾವನೆ, ನಗರಸಭೆಯ ಕುರಿತು ತಿಳುವಳಿಕೆ ಉಳ್ಳವರು ಬಂದರೆ ಜೆಡಿಎಸ್್ನಿಂದ ಸ್ಪಧಿ೯ಸುವ ಅಭ್ಯಥಿ೯ಯ ಅಧಿಕೖತ ಘೋಷಣೆ ಬರುವ ಜನವರಿ 26ಕ್ಕೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಗೆ ಸೋಲಿಸಲು ಕೆಜೆಪಿ ಬಂದಿದೆ. ಕೆಜೆಪಿಗೆ ಸೋಲಿಸುವ ನಿಧಾ೯ರ ಜೆಡಿಎಸ್್ಗೆ ಇದ್ದಂತೆ ಈ ಕ್ಷೇತ್ರದಿಂದ ಅಟ್ಟೂರ್್, ಮುಳೆ ಅವರನ್ನು ಸೋಲಿಸುವ ಗುರಿ ನನ್ನದಾಗಿದೆ. ಕಾಂಗ್ರೆಸ್್ಗೆ ನೇರ ಸ್ಪಧಿ೯ಯಾಗಿ ವಿಧಾನಸಭಾ ಚುನಾವಣೆಯಲ್ಲಿ ನಾನು ಜನಗಳ ಬೆಂಬಲ, ಅವರ ಒಲವಿನಿಂದ ಗೆಲ್ಲುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ, ಡಿಸೆಂಬರ್ 10, 2012

ಪತ್ರಿಕೆಗಳೇ ಇಲ್ಲದ ಪತ್ರಕತ೯ರಿಂದ ಸಾಮಾಜಿಕ ಸ್ವಾಸ್ತ್ಯ ಕದಡಿದರೆ ಇದಕ್ಕೆಲ್ಲ ಯಾರು ಹೊಣೆ


  ರಾಜ್ಯದಲ್ಲಿ ಆರ್ಎನ್ಐ ಅನುಮತಿ ರದ್ದಾದ ಪತ್ರಿಕೆಗಳು ಬಹಿರಂಗವಾಗಿಯೇ ಸಾವ೯ಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿವೆಃ ಇದಕ್ಕೆ ಸೂಕ್ತ ಕ್ರಮ ಏಕಿಲ್ಲ...?
ವೀರಣ್ಣ ಮಂಠಾಳಕರ್
--------------------
ಹೆಚ್ಚು ಪತ್ರಕತ೯ರಿದ್ದಷ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನುವುದಾದರೆ, ಪತ್ರಿಕೆಗಳೇ ಇಲ್ಲದ ಪತ್ರಕತ೯ರಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರು ಹುಬ್ಬೇರಿಸುವಂತಾಗಿದೆ.

ಇದಕ್ಕೆ ಸಂಬಂಧಪಟ್ಟ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ನೀಡಿರುವ ಹೇರಳವಾದ ಸದಸ್ಯತ್ವವೇ ಮೂಲ ಕಾರಣವೆನ್ನಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಇರಬೇಕಾದ ಪತ್ರಕತ೯ರು ರಾಜ್ಯ ಪತ್ರಿಕೆಗಳ ವರದಿಗಾರರನ್ನು ಹೊರತುಪಡಿಸಿದರೆ ಇಪ್ಪತ್ತಕ್ಕೂ ಹೆಚ್ಚು ಪತ್ರಕತ೯ರು ಒಂದೊಂದು ತಾಲ್ಲೂಕು ಕೇಂದ್ರದಲ್ಲಿರುವುದು ಆಶ್ಚಯ೯ದ ಸಂಗತಿ.
 

ಪತ್ರಿಕೆಗಳೇ ಇಲ್ಲದ ಪತ್ರಕತ೯ರು ಹೇರಳವಾಗಿದ್ದಾರೆ. ಯಾವುದೇ ಮಾನದಂಡಗಳನ್ನು ಪರಿಗಣಿಸದೇ ಕನಾ೯ಟಕ ಯುನಿಯನ್್ ಆಫ್್ ವಕಿ೯ಂಗ್್ ಜನ೯ಲಿಸ್ಟ್dಸಂಘವು ಕೊಡುವ ಗುರುತಿನ ಚೀಟಿ ಇದಕ್ಕೆ ಕಾರಣ ಎನ್ನಬಹುದು.

ಕೆಲವೊಂದು ಜಿಲ್ಲೆಗಳಲ್ಲಿ ಆರ್್ಎನ್್ಐ ಅನುಮತಿ ಪಡೆದಿರುವ ವಿವಿಧ ಭಾಷಾ ಪತ್ರಿಕೆಗಳು ನೂರಾರು ಸಂಖ್ಯೆಯಲ್ಲಿ ಕಂಡು ಬರುವಂತಿದ್ದರೂ ಚಾಲ್ತಿಯಲ್ಲಿರುವ ಸ್ಥಳೀಯ ಪತ್ರಿಕೆಗಳು ಬೆರಳೇಣಿಕೆಗಳಷ್ಟು ಮಾತ್ರ. ಪತ್ರಕತ೯ರು ಮಾತ್ರ ಹೇರಳವಾಗಿ ಕಂಡು ಬರುವುದು ಇದ್ಯಾವ ಲೆಕ್ಕಾಚಾರ ಎಂಬಂತಾಗಿದೆ.

ವಿವಿಧ ಪಕ್ಷದ ರಾಜಕೀಯ ಮುಖಂಡರುಗಳ ಆಯಾ ಸಂದಭ೯ಗಳಲ್ಲಿ ಪತ್ರಿಕಾಗೋಷ್ಠಿ, ಸಭೆ ಸಮಾರಂಭ, ಚುನಾವಣೆಗಳಲ್ಲಿ ಪತ್ರಿಕೆಗಳೇ ಇಲ್ಲದ ಪತ್ರಕತ೯ರು ಹಾಜರಿರುವುದು ಸೂಜಿಗದ ಸಂಗತಿಯೆಂದರೆ ತಪ್ಪಾಗಲಾರದು. ಪತ್ರಕತ೯ರ ಹುದ್ದೆಗೆ ಕಳಂಕವನ್ನು ತರುವ ಕೆಲವರು ಸಕಾ೯ರಿ ಕಚೇರಿಗಳಲ್ಲಿ ಹಫ್ತಾ ವಸೂಲಿ ದಂಧೆ ಕಾಯಕವನ್ನೇ ಮಾಡಿಕೊಂಡಂತಿದೆ.

ಆರ್್ಎನ್್ಐ ಅನುಮತಿ ರದ್ದಾದ ಪತ್ರಿಕೆಗಳು ಸಾವ೯ಜನಿಕ ವಲಯದಲ್ಲಿ ಬಹಿರಂಗವಾಗಿ ಪ್ರಕಟವಾಗುವ ಸಂಖ್ಯೆ ಒಂದೆಡೆ ಇದ್ದರೆ, ಆರ್್ಎನ್್ಐ ಅನುಮತಿ ಇದ್ದರೂ ಪ್ರಕಟವಾಗದೇ ಆಥಿ೯ಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪತ್ರಿಕೆಗಳಿಗೆ ವಾರಸುದಾರರು ಇಲ್ಲದಂತಾಗಿದೆ.

ಹಲವೆಡೆ ಪ್ರೆಸ್ಸ್್ ಎಂಬ ಪದ ದುಬ೯ಳಕೆ ಮಾಡಿಕೊಳ್ಳುತ್ತ, ಆಟೋ, ಜೀಪ, ದ್ವಿಚಕ್ರ ವಾಹನಗಳಿಂದ ಹಿಡಿದು ಮುಂತಾದ ವಾಹನಗಳ ಮೇಲೆ ರಾರಾಜಿಸುತ್ತಿರುವ ಪ್ರೆಸ್ಸ್್ ಪದ ಬಳಕೆ ಒಣ ಪ್ರತಿಷ್ಟೆಯಾಗಿದೆ. ಸಂಬಂಧಪಟ್ಟ ಪೊಲೀಸ್್ ಇಲಾಖೆಯ ಮೂಲಕ ಪ್ರೆಸ್ಸ್್ ಬಳೆಯನ್ನು ಹತೋಟಿಗೆ ತರವುದು ಅವಶ್ಯವಾಗಿದೆ.

ರದ್ದಾದ ಪತ್ರಿಕೆಗಳು ಪ್ರಕಟವಾಗುವುದನ್ನು ಗಮನ ಹರಿಸಿ ಸಂಬಂಧಪಟ್ಟ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ನಕಲಿ ಪತ್ರಕತ೯ರಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವುದರಿಂದ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾಗುವ ಪತ್ರಕತ೯ರ ಕಡಿವಾಣ ಹಾಕಬೇಕಾದ್ದು ತೀರಾ ಅವಶ್ಯ ಎಂಬ ಮಾತು ಬುದ್ಧಿಜೀವಿಗಳಲ್ಲಿ ಚಚೆ೯ಗೊಳಪಟ್ಟಿದೆ.

ಕೆಲವೆಡೆ ಹೆಸರಿಗೆ ಮಾತ್ರ ಪತ್ರಕತ೯ರೆನಿಸಿಕೊಳ್ಳಲು ಪತ್ರಿಕೆಗಳು ಹೆಚ್ಚಾದರೆ, ಇದಕ್ಕೆಲ್ಲ ಮೌನ ವಹಿಸಿರುವ ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘ ಹಾಗೂ ಮಾಧ್ಯಮ ಅಕಾಡೆಮಿಯವರು ಪ್ರತ್ಯೇಕ ಕಾನೂನು ರೂಪಿಸಲು ಮುಂದಾಗಬೇಕು.

ಜಿಲ್ಲಾ ಪತ್ರಕತ೯ರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಹ ಸದಸ್ಯತ್ವದ ಕುರಿತು ಪಾರದಶ೯ಕತೆ ಮೆರೆಯಬೇಕು. ಎಲ್ಲೆಡೆ ನಡೆಯುತ್ತಿರುವ ಅನ್ಯಾಯ ಸರಿಪಡಿಸಬೇಕು. ಪ್ರಕಟವಾಗದೇ ಇರುವ ಪತ್ರಿಕೆಗಳ ಪತ್ರಕತ೯ರಿಗೆ ಗುರುತಿನ ಚೀಟಿ ಕೊಡುವುದನ್ನು ತಡೆ ಹಿಡಿದಾಗ ಮಾತ್ರ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಬಹುದೆನ್ನಲಾಗಿದೆ.

ಪತ್ರಕತ೯ರಾದವರು ಕನಿಷ್ಠ ವರದಿಗಳನ್ನಾದರೂ ಬರೆಯಬೇಕು. ವರದಿಗಳೇ ಸಿಗದಿದ್ದರೆ ಸುತ್ತಲಿನ ಪ್ರದೇಶದಲ್ಲಿರುವ ಮೂಲ ಸಮಸ್ಯೆಗಳ ಕುರಿತಾದರೂ ಬರೆಯಬೇಕೆಂಬ ನಿಯಮಗಳು ಕೆಲವು ಪತ್ರಿಕೆಗಳದ್ದಾಗಿದ್ದರೂ ಅದಕ್ಕೆ ಬದ್ಧರಾಗಿರದ ಪತ್ರಕತ೯ರೇ ಹಲವೆಡೆ ಹೇರಳವಾಗಿ ಚಿಲ್ಲರೆ ರಾಜಕೀಯ ಮಾಡಿಕೊಂಡು ಪತ್ರಿಕೋದ್ಯಮದ ಹೆಸರಲ್ಲಿ ಅನಾಚರಗಳು ನಡೆಸುತ್ತಿದ್ದಾರೆ.

ಯಾವುದೇ ತಾಲ್ಲೂಕಿಗೆ ಹೆಚ್ಚೆಂದರೆ ಎಂಟರಿಂದ ಹತ್ತು ಜನ ಪತ್ರಕತ೯ರು ಇರಬಹುದು. ಆದರೆ ಕೆಲವೆಡೆ ಪತ್ರಕತ೯ರ ಸಂಖ್ಯೆ 25 ಕ್ಕೆ ಮೀರರಿರುತ್ತದೆ. ರಾಜ್ಯ ಪತ್ರಿಕೆಗಳ ವರದಿಗಾರರನ್ನು ಬಿಟ್ಟರೆ ಉಳಿದಂತೆ ಬೇರೆ ಭಾಷೆಯ ಪತ್ರಕತ೯ರು ಸೇರಿ, ಸ್ಥಳೀಯ ಪತ್ರಕತ೯ರಾಗಿ ಕೆಲಸ ಮಾಡುತ್ತಿರುವವರಲ್ಲಿ 10-12 ಜನ ಪತ್ರಕತ೯ರಿರಬಹುದು ಎನ್ನಲಾಗುತ್ತದೆ.

ನಿಯತಕಾಲಿಕ,ಪಾಕ್ಷಿಕ,ಮಾಸಿಕ ಪತ್ರಿಕೆಗಳು,ಎಲೆಕ್ಟ್ರಾನಿಕ ಮೀಡಿಯಾ ವರದಿಗಾರರು ಹೊರತುಪಡಿಸಿದರೆ ದಿನಪತ್ರಿಕೆಗಳ ತಾಲ್ಲೂಕು ಕೇಂದ್ರಗಳಲ್ಲಿ 25 ಕ್ಕೂ ಹೆಚ್ಚು ಇದ್ದರೆ ಯಾರೇ ಆಗಲಿ ಅನುಮಾನಿಸದೇ ಇರಲಾಗದು. ಪತ್ರಿಕೆಗಳೇ ಇಲ್ಲದ ಪತ್ರಕತ೯ರು ಎಲ್ಲೆಡೆ ಕಂಡು ಬರುತ್ತಾರೆ. ಪ್ರಸಾರವಾಗುವ ಪತ್ರಿಕೆಗಳ ಪತ್ರಕತ೯ರಿದ್ದರೆ ಸರಿ. ಪ್ರಕಟವಾಗದೇ ಇರುವ ಪತ್ರಿಕೆಯ ಪತ್ರಕತ೯ರಿದ್ದರೆ ಇದಕ್ಕೆಲ್ಲ ಯಾರು ಹೊಣೆ.?

ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಇಂತಹ ಪರಿಸ್ಥಿತಿ ರಾಜ್ಯದೆಲ್ಲೆಡೆ ಇರುವುದನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಕೈಗೊಳ್ಳಬೇಕು. ಮೂಲ ಪತ್ರಕತ೯ರಿಗೆ ತೊಂದರೆಯಾಗದಂಥ ನಿಟ್ಟಿನಲ್ಲಿ ಸದಸ್ಯತ್ವ ನೀಡಿ, ಉಳಿದವರ ಸದಸ್ಯತ್ವ ರದ್ದು ಪಡಿಸಲು ನಿಧ೯ರಿಸಿದರೆ ಸೂಕ್ತವಾಗುತ್ತದೆ ಎಂಬುದು ಅನೇಕರ ಒತ್ತಾಸೆಯಿದೆ.

ವಿವಿಧ ಜಿಲ್ಲೆಗಳಿಂದ ಪ್ರಕಟವಾಗುವ ಪತ್ರಿಕೆಗಳು ಆರ್್ಎನ್್ಐ ಅನುಮತಿ ರದ್ದಾದ ದಿನ ಪತ್ರಿಕೆಗಳು ಸಕಾ೯ರಿ ಟೆಂಡರ್್,ಜಾಹಿರಾತು ಪ್ರಕಟಣೆ ವೇಳೆ ಮಾತ್ರ ಪ್ರಕಟವಾಗುತ್ತಿವೆ. ಇಂತಹ ಪತ್ರಿಕೆಗಳತ್ತ ಹದ್ದಿನ ಕಣ್ಣಿಟ್ಟು, ಸಂಬಂಧಪಟ್ಟ ಇಲಾಖೆ, ಜಿಲ್ಲಾಧಿಕಾರಿಗಳು ಅನಧಿಕೖತವಾಗಿ ಪ್ರಕಟವಾಗುವ ಆರ್್ಎನ್್ಐ ಅನುಮತಿ ರದ್ದಾದ ದಿನ ಪತ್ರಿಕೆಗಳ ಸರಬರಾಜು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ಎಂಬುದು ಹಾಸ್ಯಾಸ್ಪದಕ್ಕೆ ಗುರಿಯಾಗುವುದರಲ್ಲಿ ಅಚ್ಚರಿಯಿಲ್ಲ.