ಸೋಮವಾರ, ಡಿಸೆಂಬರ್ 10, 2012

ಪತ್ರಿಕೆಗಳೇ ಇಲ್ಲದ ಪತ್ರಕತ೯ರಿಂದ ಸಾಮಾಜಿಕ ಸ್ವಾಸ್ತ್ಯ ಕದಡಿದರೆ ಇದಕ್ಕೆಲ್ಲ ಯಾರು ಹೊಣೆ


  ರಾಜ್ಯದಲ್ಲಿ ಆರ್ಎನ್ಐ ಅನುಮತಿ ರದ್ದಾದ ಪತ್ರಿಕೆಗಳು ಬಹಿರಂಗವಾಗಿಯೇ ಸಾವ೯ಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿವೆಃ ಇದಕ್ಕೆ ಸೂಕ್ತ ಕ್ರಮ ಏಕಿಲ್ಲ...?
ವೀರಣ್ಣ ಮಂಠಾಳಕರ್
--------------------
ಹೆಚ್ಚು ಪತ್ರಕತ೯ರಿದ್ದಷ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನುವುದಾದರೆ, ಪತ್ರಿಕೆಗಳೇ ಇಲ್ಲದ ಪತ್ರಕತ೯ರಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರು ಹುಬ್ಬೇರಿಸುವಂತಾಗಿದೆ.

ಇದಕ್ಕೆ ಸಂಬಂಧಪಟ್ಟ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ನೀಡಿರುವ ಹೇರಳವಾದ ಸದಸ್ಯತ್ವವೇ ಮೂಲ ಕಾರಣವೆನ್ನಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಇರಬೇಕಾದ ಪತ್ರಕತ೯ರು ರಾಜ್ಯ ಪತ್ರಿಕೆಗಳ ವರದಿಗಾರರನ್ನು ಹೊರತುಪಡಿಸಿದರೆ ಇಪ್ಪತ್ತಕ್ಕೂ ಹೆಚ್ಚು ಪತ್ರಕತ೯ರು ಒಂದೊಂದು ತಾಲ್ಲೂಕು ಕೇಂದ್ರದಲ್ಲಿರುವುದು ಆಶ್ಚಯ೯ದ ಸಂಗತಿ.
 

ಪತ್ರಿಕೆಗಳೇ ಇಲ್ಲದ ಪತ್ರಕತ೯ರು ಹೇರಳವಾಗಿದ್ದಾರೆ. ಯಾವುದೇ ಮಾನದಂಡಗಳನ್ನು ಪರಿಗಣಿಸದೇ ಕನಾ೯ಟಕ ಯುನಿಯನ್್ ಆಫ್್ ವಕಿ೯ಂಗ್್ ಜನ೯ಲಿಸ್ಟ್dಸಂಘವು ಕೊಡುವ ಗುರುತಿನ ಚೀಟಿ ಇದಕ್ಕೆ ಕಾರಣ ಎನ್ನಬಹುದು.

ಕೆಲವೊಂದು ಜಿಲ್ಲೆಗಳಲ್ಲಿ ಆರ್್ಎನ್್ಐ ಅನುಮತಿ ಪಡೆದಿರುವ ವಿವಿಧ ಭಾಷಾ ಪತ್ರಿಕೆಗಳು ನೂರಾರು ಸಂಖ್ಯೆಯಲ್ಲಿ ಕಂಡು ಬರುವಂತಿದ್ದರೂ ಚಾಲ್ತಿಯಲ್ಲಿರುವ ಸ್ಥಳೀಯ ಪತ್ರಿಕೆಗಳು ಬೆರಳೇಣಿಕೆಗಳಷ್ಟು ಮಾತ್ರ. ಪತ್ರಕತ೯ರು ಮಾತ್ರ ಹೇರಳವಾಗಿ ಕಂಡು ಬರುವುದು ಇದ್ಯಾವ ಲೆಕ್ಕಾಚಾರ ಎಂಬಂತಾಗಿದೆ.

ವಿವಿಧ ಪಕ್ಷದ ರಾಜಕೀಯ ಮುಖಂಡರುಗಳ ಆಯಾ ಸಂದಭ೯ಗಳಲ್ಲಿ ಪತ್ರಿಕಾಗೋಷ್ಠಿ, ಸಭೆ ಸಮಾರಂಭ, ಚುನಾವಣೆಗಳಲ್ಲಿ ಪತ್ರಿಕೆಗಳೇ ಇಲ್ಲದ ಪತ್ರಕತ೯ರು ಹಾಜರಿರುವುದು ಸೂಜಿಗದ ಸಂಗತಿಯೆಂದರೆ ತಪ್ಪಾಗಲಾರದು. ಪತ್ರಕತ೯ರ ಹುದ್ದೆಗೆ ಕಳಂಕವನ್ನು ತರುವ ಕೆಲವರು ಸಕಾ೯ರಿ ಕಚೇರಿಗಳಲ್ಲಿ ಹಫ್ತಾ ವಸೂಲಿ ದಂಧೆ ಕಾಯಕವನ್ನೇ ಮಾಡಿಕೊಂಡಂತಿದೆ.

ಆರ್್ಎನ್್ಐ ಅನುಮತಿ ರದ್ದಾದ ಪತ್ರಿಕೆಗಳು ಸಾವ೯ಜನಿಕ ವಲಯದಲ್ಲಿ ಬಹಿರಂಗವಾಗಿ ಪ್ರಕಟವಾಗುವ ಸಂಖ್ಯೆ ಒಂದೆಡೆ ಇದ್ದರೆ, ಆರ್್ಎನ್್ಐ ಅನುಮತಿ ಇದ್ದರೂ ಪ್ರಕಟವಾಗದೇ ಆಥಿ೯ಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪತ್ರಿಕೆಗಳಿಗೆ ವಾರಸುದಾರರು ಇಲ್ಲದಂತಾಗಿದೆ.

ಹಲವೆಡೆ ಪ್ರೆಸ್ಸ್್ ಎಂಬ ಪದ ದುಬ೯ಳಕೆ ಮಾಡಿಕೊಳ್ಳುತ್ತ, ಆಟೋ, ಜೀಪ, ದ್ವಿಚಕ್ರ ವಾಹನಗಳಿಂದ ಹಿಡಿದು ಮುಂತಾದ ವಾಹನಗಳ ಮೇಲೆ ರಾರಾಜಿಸುತ್ತಿರುವ ಪ್ರೆಸ್ಸ್್ ಪದ ಬಳಕೆ ಒಣ ಪ್ರತಿಷ್ಟೆಯಾಗಿದೆ. ಸಂಬಂಧಪಟ್ಟ ಪೊಲೀಸ್್ ಇಲಾಖೆಯ ಮೂಲಕ ಪ್ರೆಸ್ಸ್್ ಬಳೆಯನ್ನು ಹತೋಟಿಗೆ ತರವುದು ಅವಶ್ಯವಾಗಿದೆ.

ರದ್ದಾದ ಪತ್ರಿಕೆಗಳು ಪ್ರಕಟವಾಗುವುದನ್ನು ಗಮನ ಹರಿಸಿ ಸಂಬಂಧಪಟ್ಟ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ನಕಲಿ ಪತ್ರಕತ೯ರಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವುದರಿಂದ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾಗುವ ಪತ್ರಕತ೯ರ ಕಡಿವಾಣ ಹಾಕಬೇಕಾದ್ದು ತೀರಾ ಅವಶ್ಯ ಎಂಬ ಮಾತು ಬುದ್ಧಿಜೀವಿಗಳಲ್ಲಿ ಚಚೆ೯ಗೊಳಪಟ್ಟಿದೆ.

ಕೆಲವೆಡೆ ಹೆಸರಿಗೆ ಮಾತ್ರ ಪತ್ರಕತ೯ರೆನಿಸಿಕೊಳ್ಳಲು ಪತ್ರಿಕೆಗಳು ಹೆಚ್ಚಾದರೆ, ಇದಕ್ಕೆಲ್ಲ ಮೌನ ವಹಿಸಿರುವ ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘ ಹಾಗೂ ಮಾಧ್ಯಮ ಅಕಾಡೆಮಿಯವರು ಪ್ರತ್ಯೇಕ ಕಾನೂನು ರೂಪಿಸಲು ಮುಂದಾಗಬೇಕು.

ಜಿಲ್ಲಾ ಪತ್ರಕತ೯ರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಹ ಸದಸ್ಯತ್ವದ ಕುರಿತು ಪಾರದಶ೯ಕತೆ ಮೆರೆಯಬೇಕು. ಎಲ್ಲೆಡೆ ನಡೆಯುತ್ತಿರುವ ಅನ್ಯಾಯ ಸರಿಪಡಿಸಬೇಕು. ಪ್ರಕಟವಾಗದೇ ಇರುವ ಪತ್ರಿಕೆಗಳ ಪತ್ರಕತ೯ರಿಗೆ ಗುರುತಿನ ಚೀಟಿ ಕೊಡುವುದನ್ನು ತಡೆ ಹಿಡಿದಾಗ ಮಾತ್ರ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಬಹುದೆನ್ನಲಾಗಿದೆ.

ಪತ್ರಕತ೯ರಾದವರು ಕನಿಷ್ಠ ವರದಿಗಳನ್ನಾದರೂ ಬರೆಯಬೇಕು. ವರದಿಗಳೇ ಸಿಗದಿದ್ದರೆ ಸುತ್ತಲಿನ ಪ್ರದೇಶದಲ್ಲಿರುವ ಮೂಲ ಸಮಸ್ಯೆಗಳ ಕುರಿತಾದರೂ ಬರೆಯಬೇಕೆಂಬ ನಿಯಮಗಳು ಕೆಲವು ಪತ್ರಿಕೆಗಳದ್ದಾಗಿದ್ದರೂ ಅದಕ್ಕೆ ಬದ್ಧರಾಗಿರದ ಪತ್ರಕತ೯ರೇ ಹಲವೆಡೆ ಹೇರಳವಾಗಿ ಚಿಲ್ಲರೆ ರಾಜಕೀಯ ಮಾಡಿಕೊಂಡು ಪತ್ರಿಕೋದ್ಯಮದ ಹೆಸರಲ್ಲಿ ಅನಾಚರಗಳು ನಡೆಸುತ್ತಿದ್ದಾರೆ.

ಯಾವುದೇ ತಾಲ್ಲೂಕಿಗೆ ಹೆಚ್ಚೆಂದರೆ ಎಂಟರಿಂದ ಹತ್ತು ಜನ ಪತ್ರಕತ೯ರು ಇರಬಹುದು. ಆದರೆ ಕೆಲವೆಡೆ ಪತ್ರಕತ೯ರ ಸಂಖ್ಯೆ 25 ಕ್ಕೆ ಮೀರರಿರುತ್ತದೆ. ರಾಜ್ಯ ಪತ್ರಿಕೆಗಳ ವರದಿಗಾರರನ್ನು ಬಿಟ್ಟರೆ ಉಳಿದಂತೆ ಬೇರೆ ಭಾಷೆಯ ಪತ್ರಕತ೯ರು ಸೇರಿ, ಸ್ಥಳೀಯ ಪತ್ರಕತ೯ರಾಗಿ ಕೆಲಸ ಮಾಡುತ್ತಿರುವವರಲ್ಲಿ 10-12 ಜನ ಪತ್ರಕತ೯ರಿರಬಹುದು ಎನ್ನಲಾಗುತ್ತದೆ.

ನಿಯತಕಾಲಿಕ,ಪಾಕ್ಷಿಕ,ಮಾಸಿಕ ಪತ್ರಿಕೆಗಳು,ಎಲೆಕ್ಟ್ರಾನಿಕ ಮೀಡಿಯಾ ವರದಿಗಾರರು ಹೊರತುಪಡಿಸಿದರೆ ದಿನಪತ್ರಿಕೆಗಳ ತಾಲ್ಲೂಕು ಕೇಂದ್ರಗಳಲ್ಲಿ 25 ಕ್ಕೂ ಹೆಚ್ಚು ಇದ್ದರೆ ಯಾರೇ ಆಗಲಿ ಅನುಮಾನಿಸದೇ ಇರಲಾಗದು. ಪತ್ರಿಕೆಗಳೇ ಇಲ್ಲದ ಪತ್ರಕತ೯ರು ಎಲ್ಲೆಡೆ ಕಂಡು ಬರುತ್ತಾರೆ. ಪ್ರಸಾರವಾಗುವ ಪತ್ರಿಕೆಗಳ ಪತ್ರಕತ೯ರಿದ್ದರೆ ಸರಿ. ಪ್ರಕಟವಾಗದೇ ಇರುವ ಪತ್ರಿಕೆಯ ಪತ್ರಕತ೯ರಿದ್ದರೆ ಇದಕ್ಕೆಲ್ಲ ಯಾರು ಹೊಣೆ.?

ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಇಂತಹ ಪರಿಸ್ಥಿತಿ ರಾಜ್ಯದೆಲ್ಲೆಡೆ ಇರುವುದನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಕೈಗೊಳ್ಳಬೇಕು. ಮೂಲ ಪತ್ರಕತ೯ರಿಗೆ ತೊಂದರೆಯಾಗದಂಥ ನಿಟ್ಟಿನಲ್ಲಿ ಸದಸ್ಯತ್ವ ನೀಡಿ, ಉಳಿದವರ ಸದಸ್ಯತ್ವ ರದ್ದು ಪಡಿಸಲು ನಿಧ೯ರಿಸಿದರೆ ಸೂಕ್ತವಾಗುತ್ತದೆ ಎಂಬುದು ಅನೇಕರ ಒತ್ತಾಸೆಯಿದೆ.

ವಿವಿಧ ಜಿಲ್ಲೆಗಳಿಂದ ಪ್ರಕಟವಾಗುವ ಪತ್ರಿಕೆಗಳು ಆರ್್ಎನ್್ಐ ಅನುಮತಿ ರದ್ದಾದ ದಿನ ಪತ್ರಿಕೆಗಳು ಸಕಾ೯ರಿ ಟೆಂಡರ್್,ಜಾಹಿರಾತು ಪ್ರಕಟಣೆ ವೇಳೆ ಮಾತ್ರ ಪ್ರಕಟವಾಗುತ್ತಿವೆ. ಇಂತಹ ಪತ್ರಿಕೆಗಳತ್ತ ಹದ್ದಿನ ಕಣ್ಣಿಟ್ಟು, ಸಂಬಂಧಪಟ್ಟ ಇಲಾಖೆ, ಜಿಲ್ಲಾಧಿಕಾರಿಗಳು ಅನಧಿಕೖತವಾಗಿ ಪ್ರಕಟವಾಗುವ ಆರ್್ಎನ್್ಐ ಅನುಮತಿ ರದ್ದಾದ ದಿನ ಪತ್ರಿಕೆಗಳ ಸರಬರಾಜು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ಎಂಬುದು ಹಾಸ್ಯಾಸ್ಪದಕ್ಕೆ ಗುರಿಯಾಗುವುದರಲ್ಲಿ ಅಚ್ಚರಿಯಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ